ಮೈಸೂರು: ದೇವೇಗೌಡರ ಕುಟುಂಬದ ಭೂಕಬಳಿಯ ಪಕ್ಷಿನೋಟ ಎನ್ನುವ ಶೀರ್ಷಿಕೆಯೊಂದಿಗೆ, ಈ ಹಿಂದೆ ಬಿಜೆಪಿ ಜೆಡಿಎಸ್ ವಿರುದ್ಧ ನೀಡಿದ್ದ ಜಾಹೀರಾತನ್ನು ಕಾಂಗ್ರೆಸ್ ದೊಡ್ಡ ಫ್ಲೆಕ್ಸ್ ಮೂಲಕ ನಗರದ ವಿವಿಧ ವೃತ್ತಗಳಲ್ಲಿ ಹಾಕಿ ಮೈತ್ರಿ ಪಕ್ಷಗಳಿಗೆ ಮುಜುಗರವನ್ನು ಉಂಟು ಮಾಡಿತ್ತು.
ಇದೀಗ, ಅದೇ ಮಾದರಿಯಲ್ಲಿ ಮೈತ್ರಿ ಪಕ್ಷವಾದ ಜೆಡಿಎಸ್ ಬಿಜೆಪಿಯು ಭ್ರಷ್ಟಕಾಂಗ್ರೆಸ್ ಹಗರಣಗಳ ಸರ್ಕಾರ ಎನ್ನುವ ಶಿರ್ಷಿಕೆಯೊಂದಿಗೆ ಸಮಾವೇಶ ನಡೆಯುತ್ತಿರುವ ಮಹಾರಾಜು ಕಾಲೇಜು ಮೈದಾನದ ಧ್ವಾರದಲ್ಲಿ ಫ್ಲೆಕ್ಸ್ ಮಾಡಿಸಿ ಹಾಕಿಸಿದೆ.
ಫೆಕ್ಸ್‌ನಲ್ಲಿ ಕಾಂಗ್ರೆಸ್ ಹಗರಣಗಳ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳ ಶೀರ್ಷಿಕೆಯನ್ನು ಮುದ್ರಿಸಿ, ಇದು ಭ್ರಷ್ಟ ಕಾಂಗ್ರೆಸ್‌ನ ಬಂಡವಾಳ ಎಂದು ಪ್ರಕಟಿಸಿದೆ.
ಮೈತ್ರಿ ಪಕ್ಷಗಳ ಮೈಸೂರು ಚಲೋ ಪಾದಯಾತ್ರೆಗೆ ಕಾಂಗ್ರೆಸ್ ನಿನ್ನೆ ಕೌಂಟರ್ ನೀಡಿದೆ. ಇದೀಗ ಮೈತ್ರಿ ಪಕ್ಷಗಳು ಸಹ ಇಂದು ಕಾಂಗ್ರೆಸ್ ವಿರುದ್ಧ ರಣಕಹಳ ಮೊಳಗಿಸಲಿವೆ. ಮೂರು ಪಕ್ಷಗಳು ಜಿದ್ದಿಗೆ ಬಿದ್ದಂತೆ ತಮ್ಮ ತಮ್ಮ ಕಾರ್ಯಕ್ರಮಗಳ ಯಶಸ್ಸಿಗೆ ಪಣತೊಟ್ಟಿವೆ.