Mysore
17
clear sky

Social Media

ಗುರುವಾರ, 29 ಜನವರಿ 2026
Light
Dark

ಮೈಸೂರು-ಅಜ್ಮೀರ್-ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ ಸೇವೆಗಳ ವಿಸ್ತರಣೆ

ಮೈಸೂರು: ಮೈಸೂರು-ಅಜ್ಮೀರ್-ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ.

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಮೈಸೂರು-ಅಜ್ಮೀರ್-ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ.

ಮೈಸೂರು-ಅಜ್ಮೀರ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಈ ಮೊದಲು ನವೆಂಬರ್.29ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು. ಇದರ ಸಂಚಾರವನ್ನು 2025ರ ಡಿಸೆಂಬರ್.‌6ರಿಂದ ಜನವರಿ 2026ರ ಜನವರಿ.31ರವರೆಗೆ ವಿಸ್ತರಣೆ ಮಾಡಲಾಗಿದೆ. ಇದು ಪ್ರತಿ ಶನಿವಾರದಂದು ಸಂಚರಿಸಲಿದೆ.

ಇದೇ ರೀತಿ ಅಜ್ಮೀರ್‌-ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ಡಿಸೆಂಬರ್.‌1ರವರೆಗೆ ಚಲಿಸಲು ನಿಗದಿಯಾಗಿತ್ತು. ಈಗ ಇದರ ಸಂಚಾರವನ್ನು 2025ರ ಡಿಸೆಂಬರ್.‌8ರಿಂದ 2026ರ ಫೆಬ್ರವರಿ.2 ರವರೆಗೆ ವಿಸ್ತರಿಸಲಾಗಿದೆ. ಇದು ಪ್ರತಿ ಸೋಮವಾರದಂದು ಸಂಚಾರ ಮಾಡಲಿದೆ.

Tags:
error: Content is protected !!