ಮೈಸೂರು : ನಗರದಾದ್ಯಂತ ಭಾನುವಾರ ರಾತ್ರಿ ಸುರಿದು ಗಾಳಿ-ಮಳೆಗೆ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಭಾನುವಾರ ರಾತ್ರಿಯೂ ಮಳೆ ಸುರಿದಿದ್ದು, ಇಂದು ಅಂದರೆ ಸೋಮವಾರ ಬೆಳಿಗ್ಗೆಯೂ ಕೆಲವೆಡೆ ಸೋನೆ ಮಳೆ ಮುಂದುವರೆದಿತ್ತು.
ಇದರಿಂದ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ನಗರದ ಚಾಮರಾಜಪುರಂ ಏರ್‌ಲೈನ್ಸ್ ಹೋಟೆಲ್ ಬಳಿ ಕಾರಿನ ಮೇಲೆ ವಿದ್ಯುತ್ ಕಂಬ ಹಾಗು ಬೈಕ್‌ನ ಮೇಲೆ ಮರ ಬಿದ್ದಿದೆ.
ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೋನೆ ಮಳೆಯಿಂದ ಕಚೇರಿಗೆ ಹೋಗುವವರು ಪರದಾಡುವಂತ ಸ್ಥಿತಿಯೂ ನಿರ್ಮಾಣವಾಯಿತು. ಇನ್ನೂ ಅಲ್ಲಲ್ಲಿ ಮರಗಳ ಕೊಂಬೆಗಳು ಮುರಿದು ಬಿದ್ದಿದ್ದವು





