Mysore
24
broken clouds

Social Media

ಬುಧವಾರ, 30 ಏಪ್ರಿಲ 2025
Light
Dark

ಮೈಸೂರು| ಜಾತಿಗಣತಿ ವರದಿ ಬಿಡುಗಡೆಗೆ ಜಿಲ್ಲಾ ಒಕ್ಕಲಿಗರ ಸಂಘ ತೀವ್ರ ವಿರೋಧ

ಮೈಸೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಜಾತಿ ಗಣತಿ ವರದಿ ಬಿಡುಗಡೆಗೆ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ (District Vokkaliga Association) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ಕೇವಲ ಯಾವುದೋ ಒಂದು ಎಸಿ ರೂಮಲ್ಲಿ ಕುಳಿತು ತಯಾರಿಸಿದ ವರದಿ ಎಂದು ಕಿಡಿಕಾರಿದೆ.

ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ಅವರು, 2015ರಲ್ಲಿ ಅಂದಿನ ಸರ್ಕಾರ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ನಡೆಸಿಲ್ಲ. ಇದು ಕೇವಲ ಯಾವುದೋ ಒಂದು ಎಸಿ ರೂಮಲ್ಲಿ ಕೂತು ತಯಾರಿದ ವರದಿ ಆಗಿದೆ.

ಸುದ್ದಿ ಹಿನ್ನೆಲೆ:- ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಬಗ್ಗೆ ಚರ್ಚಿಸಿ ನಿರ್ಧಾರ: ಸಿಎಂ ಸಿದ್ದರಾಮಯ್ಯ

1987ರ ಚಿನ್ನಪ್ಪರೆಡ್ಡಿ ಆಯೋಗದ ಪ್ರಕಾರ ಅಂದೇ ಸುಮಾರು 51 ಲಕ್ಷ ಒಕ್ಕಲಿಗರು ಇದ್ದಾರೆ ಎಂದು ವರದಿ ಹೇಳಿದೆ. ಅದಾದ ಬಳಿಕ 1991ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 55 ಲಕ್ಷ ಇದ್ದಾರೆ ಎಂದು ಸಮೀಕ್ಷೆ ಹೇಳುತ್ತದೆ. ಪ್ರಸ್ತುತ ರಾಜ್ಯದಲ್ಲಿ ಒಕ್ಕಲಿಗರ ಸಂಖ್ಯೆ ಕೇವಲ 61 ಲಕ್ಷ ಎಂದು ಅಂಕಿ ಅಂಶ ಕೊಟ್ಟಿದ್ದಾರೆ. ಹಾಗಾದರೆ 34 ವರ್ಷಗಳಲ್ಲಿ ಕೇವಲ ಐದಾರು ಲಕ್ಷ ಮಾತ್ರ ಹೆಚ್ಚಳವಾಗಿದೆಯಾ ಎಂದು ಪ್ರಶ್ನೆ ಮಾಡಿದರು.

ಹೆಚ್ಚಿನ ಮಾಹಿತಿ:- ಜಾತಿಗಣತಿ ವರದಿಯಲ್ಲಿ ಒಕ್ಕಲಿಗ ಸಮಾಜಕ್ಕೆ ಅನ್ಯಾಯವಾದರೆ ಸಿಡಿದೇಳಬೇಕಾಗುತ್ತದೆ: ಡಿ.ವಿ.ಸದಾನಂದಗೌಡ

ಇನ್ನು ಸರಿಯಾಗಿ ಸಮೀಕ್ಷೆ ನಡೆಸಿದ್ರೆ ಒಕ್ಕಲಿಗರಲ್ಲೇ 90 ಲಕ್ಷದಿಂದ 1 ಕೋಟಿ ಅಷ್ಟು ಜನಸಂಖ್ಯೆ ಇದೆ. ಕಾಂಗ್ರೆಸ್ ಸರ್ಕಾರ ತಪ್ಪು ಅಂಕಿ ಅಂಶಗಳನ್ನು ನೀಡಿ ಒಕ್ಕಲಿಗರನ್ನು ಹತ್ತಿಕ್ಕುವ ಹಾಗೂ ತುಳಿಯುವ ಕೆಲಸ ಮಾಡುತ್ತಿದೆ. ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳನ್ನು ರಾಜಕೀಯವಾಗಿ ತುಳಿಯುವ ಕೆಲಸ ಮಾಡುತ್ತಿದೆ. ಜಾತಿಗಣತಿಗೆ ನಮ್ಮ ವಿರೋಧ ಇಲ್ಲ. ಆದರೆ ಅದು ವೈಜ್ಞಾನಿಕ ಜಾತಿಗಣತಿ ಆಗಲಿ. ಈಗ ಬಿಡುಗಡೆಗೆ ಸಿದ್ಧವಾಗಿರುವ ಜಾತಿಗಣತಿ ವರದಿಯನ್ನ ತೀವ್ರವಾಗಿ ವಿರೋಧಿಸುತ್ತೇವೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಪ್ರತಿ ಗ್ರಾಮದಲ್ಲೂ ಪ್ರತಿಭಟನೆ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Tags: