ಮೈಸೂರು : ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿ ಕೇಸ್ ಕೊಟ್ಟವರ ಒಂದೊಂದೇ ಬಣ್ಣ ಈಗ ಬಯಲಾಗುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಧರ್ಮಸ್ಥಳ ಕೇಸ್ ವಾಪಸ್ ವಿಚಾರವಾಗಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯದುವೀರ್, ಕೇಸ್ ಕೊಟ್ಟವರ ನೈಜ ಬಣ್ಣ, ಹುನ್ನಾರಗಳು ಬಯಲಾಗುತ್ತಿದೆ. ಧರ್ಮಸ್ಥಳದ ಹೆಸರಿಗೆ ಕಪ್ಪು ಮಸಿ ಬಳಿಯಲು ಷಡ್ಯಂತ್ರ ನಡೆದಿತ್ತು ಎಂಬುದು ಮೊದಲಿನಿಂದಲೂ ಗೊತ್ತು. ಈಗ ಕಾನೂನಾತ್ಮಕವಾಗಿ ಅದು ಸಾಭೀತಾಗುತ್ತಿದೆ.ಯಾವ ಅಸ್ತಿ ಪಂಜರಗಳು ಸಿಗಲಿಲ್ಲ.ಹೀಗಾಗಿ ಕೇಸ್ ವಾಪಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದರು.
ಸೌಜನ್ಯ ಕೇಸ್ ಬಗ್ಗೆಯೂ ಪೂರ್ಣವಾಗಿ ತನಿಖೆಯಾಗಬೇಕು.ಎಲ್ಲ ಸತ್ಯಗಳು ಹೊರಬರಲಿ ಎಂದು ಹೇಳಿದರು.
ಇದನ್ನೂ ಓದಿ:-ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ನಾಳೆ ಮುಕ್ತಾಯ, ಆನ್‌ಲೈನ್‌ನಲ್ಲಿ ಸಮೀಕ್ಷೆ ವಿಸ್ತರಣೆ
ಕೇಂದ್ರ ಚುನಾವಣಾ ಆಯುಕ್ತರನ್ನು ರಾಜಕೀಯ ಪುಡಾರಿ ಎಂದ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಾಂವಿಧಾನಿಕ ಸಂಸ್ಥೆಗಳಿಲ್ಲಿ ಇರುವವರಿಗೆ ಗೌರವದಿಂದ ಮಾತನಾಡಬೇಕು. ಅವರ ಸರ್ಕಾರ ಬಂದಿದ್ದು ಕೂಡ ಇದೇ ಚುನಾವಣೆ ವ್ಯವಸ್ಥೆಯಿಂದ. ಸರ್ಕಾರ ಬಂದಾಗ ಸರಿ ಎನ್ನುವುದು ಬರದಿದ್ದಾಗ ತಪ್ಪು ಎನ್ನುವುದು ಎಷ್ಟು ಸರಿ? ಎಂಬುದನ್ನು ಅವರೇ ಹೇಳಲಿ ಎಂದು ತಿರುಗೇಟು ನೀಡಿದರು. ಯಾರೋ ಒಂದಿಬ್ಬರ ಹೇಳಿಗಳಿಂದ ಈ ವ್ಯವಸ್ಥೆಗೆ ಅನುಮಾನಗಳು ಮೂಡುವುದಿಲ್ಲ.ಅಂತಹ ಅಭಿಪ್ರಾಯಗಳಿಗೆ ಬೆಲೆ ಕೊಡುವುದು ಬೇಡ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಕಾರಣಕ್ಕೆ ಕರ್ನಾಟಕದಿಂದ ಉದ್ಯಮಗಳು ಬೇರೆ ಕಡೆ ಹೋಗುತ್ತಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೆ ಉದ್ಯಮಗಳು ರಾಜ್ಯದ ಕೈತಪ್ತ್ಯ್ಪುತ್ತಿದೆ ಎಂಬುದು ಯೋಚನೆ ಮಾಡಬೇಕು.ಸುಮ್ಮನೆ ರಾಜಕೀಯವಾಗಿ ಹೇಳುವುದು ಸರಿಯಲ್ಲ.
ಕರ್ನಾಟಕದಲ್ಲಿ ವ್ಯವಸ್ಥೆಗಳ ಸರಿಯಿಲ್ಲದ ಕಾರಣ ಉದ್ಯಮಗಳು ಬೇರೆ ಕಡೆ ಹೋಗುತ್ತಿದೆ.ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಲ್ಲಾ ವ್ಯವಸ್ಥೆ ಸಿಗುತ್ತಿದೆ. ಹೀಗಾಹಿ ಪಕ್ಕದ ರಾಜ್ಯಕ್ಕೆ ಉದ್ಯಮಗಳು ಹೋಗುತ್ತಿದೆ. ಕರ್ನಾಟಕ ಸರ್ಕಾರ ಯಾವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿದೆ ನೀವೆ ಹೇಳಿ. ಗ್ಯಾರೆಂಟಿ ಯೋಜನೆ ಬಿಟ್ಟರೆ ಅವರ ಬಾಯಲಿ ಇನ್ನೂ ಏನೂ ಬರುತ್ತಿಲ್ಲ. ಗುಂಡಿ ಮುಚ್ಚಲು ಸಹ ಇಲ್ಲಿ ಹಣ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.





