Mysore
22
clear sky

Social Media

ಭಾನುವಾರ, 15 ಮಾರ್ಚ್ 2026
Light
Dark

ಬದಲಿ ಪಾರ್ಕಿಂಗ್‌ ಸ್ಥಳಕ್ಕಾಗಿ ಒತ್ತಾಯ

mysure parking problem

ಮೈಸೂರು : ಬಸ್ ಹಾಗೂ ಕಾರಿನ ಓಡಾಟ ಹೆಚ್ಚಾಗಿರುವ ಕಾರಣ ತಾತ್ಕಾಲಿಕವಾಗಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳ ಬದಲಿಸಿ ಎಂದು ಸ್ಥಳೀಯರು ಕೆ.ಆರ್.ಸಂಚಾರ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

ಅಗ್ರಹಾರದಲ್ಲಿ ಯುಜಿಡಿ ಸಮಸ್ಯೆಯಿಂದ ಅಲ್ಲಿನ ರಸ್ತೆ ಬಂದ್ ಆಗಿರುವುದರಿಂದ ಪಾರ್ಕಿಂಗ್‌ನಲ್ಲಿ ದ್ವಿಚಕ್ರ ವಾಹನಗಳು ಎರಡು ಭಾಗದಲ್ಲಿ ನಿಲ್ಲುವುದರಿಂದ ಬಸ್ ಹಾಗೂ ಕಾರ್‌ಗಳ ಓಡಾಟಕ್ಕೆ ಕಿರಿಕಿರಿ ಎದುರಾಗಿದೆ.

ಅಗ್ರಹಾರದಲ್ಲಿನ ಯುಜಿಡಿ ಕಾಮಗಾರಿ ಮುಗಿದ ಮೇಲೆ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಅವಕಾಶ ನೀಡಿ, ಅಲ್ಲಿಯವರೆಗೆ ತಾತ್ಕಾಲಿಕವಾಗಿ ಸ್ಥಳ ಬದಲಿಸಿ ನೋ ಪಾರ್ಕಿಂಗ್ ನಾಮಫಲಕ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಪಾರ್ಕಿಂಗ್ ಸ್ಥಳದಲ್ಲಿ ಬೈಕ್, ಕಾರ್ ನಿಲ್ಲಿಸುತ್ತಾರೆ. ಇಲ್ಲಿ ನಿತ್ಯ ನೂರಾರು ಬೈಕ್‌ಗಳು ನಿಲ್ಲಿಸುತ್ತಾರೆ. ನಿತ್ಯ ನೂರಾರು ಬೈಕ್‌ಗಳು ನಿಂತಿರುತ್ತವೆ. ಇಂಥ ವಾಹನಗಳ ಪಾರ್ಕಿಂಗ್‌ನಿಂದ ಅಪಘಾತಕ್ಕೆ ಕಾರಣವಾಗಬಹುದು. ಕೆ.ಆರ್.ಸಂಚಾರ ಠಾಣೆ ವ್ಯಾಪ್ತಿಗೆ ಬರುವುದರಿಂದ ಮುನ್ನಚ್ಚರಿಕೆ ಕೈಗೊಳ್ಳಬೇಕು ಎಂದು ಸುಣ್ಣದಕೇರಿಯ ನಿವಾಸಿಗಳು ಮನವಿ ಮಾಡಿದ್ದಾರೆ.

Tags:
error: Content is protected !!