ಮೈಸೂರು: ಅರಮನೆಯಲ್ಲಿ ಕಂಜನ್ ಹಾಗೂ ಧನಂಜಯ ಆನೆಗಳ ಜಗಳ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಅರಮನೆ ಆವರಣದಲ್ಲಿ ಬಹಳ ಗಂಭೀರವಾದ ಘಟನೆ ನಡೆದಿದೆ. ಆನೆಗಳ ಗಲಾಟೆ ವಿಡಿಯೋವನ್ನು ನಾನು ಕೂಡ ನೋಡಿದ್ದೇನೆ. ಇದು ಜನರಿಂದ ಆಗಿರುವುದಲ್ಲ ಎಂಬ ವರದಿ ಬಂದಿದೆ ಎಂದು ಹೇಳಿದರು.
ಇನ್ನು ದಸರಾ ಆನೆಗಳಿಗೆ ಭದ್ರತೆಯನ್ನು ಇನ್ನಷ್ಟು ಹೆಚ್ಚಳ ಮಾಡಬೇಕು. ಇದರ ಜೊತೆಗೆ ಆನೆಗಳ ಮುಂದೆ ಫೋಟೋ, ವಿಡಿಯೋ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.