Mysore
24
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಕಾಂಗ್ರೆಸ್‌ ಡೋಂಗಿ ರಾಜಕಾರಣ ಅನುಸರಿಸುತ್ತಿದೆ: ವಕೀಲ ಅರುಣ್ ಕುಮಾರ್ ಹಾಗೂ ಭಾಸ್ಕರ್ ಪ್ರಸಾದ್ ಆಕ್ರೋಶ

ಮೈಸೂರು: ಒಳ ಮೀಸಲಾತಿ ನೀಡುವ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ಬಂದು ಒಂದು ವರ್ಷವಾಗಿದ್ದು, ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಮಾದಿಗರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆ ಮತ್ತು ಒಳ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಕೀಲ ಅರುಣ್ ಕುಮಾರ್ ಅವರು, ಒಳ ಮೀಸಲಾತಿ ನೀಡುವ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ಬಂದು ಒಂದು ವರ್ಷ ಆಯ್ತು. ಇತರೆ ರಾಜ್ಯಗಳು ಬೇಗ ಡಾಟಾ ಕಲೆಕ್ಟ್ ಮಾಡಿವೆ. ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಮಾದಿಗರ ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ಸಮುದಾಯದ ಮತ ಬ್ಯಾಂಕ್ ಪಡೆಯಲು ಪಿತೂರಿ ಮಾಡುತ್ತಿದೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಧಿಕಾರಕ್ಕೆ ಬಂದಿದೆ. ಆದರೂ ಕಾಂಗ್ರೆಸ್ ಡೋಂಗಿ ರಾಜಕಾರಣ ಅನುಸರಿಸುತ್ತಿದೆ. ಒಳ ಮೀಸಲಾತಿ ಕೊಡುವ ವೇಳೆ ಸಮೀಕ್ಷೆ ಅವಶ್ಯಕತೆ ಇಲ್ಲ. ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕೊಡುವ ನಿರ್ಧಾರ ಮಾಡಿಲ್ಲ. ಒಳ ಮೀಸಲಾತಿ ಕೊಡುವ ಮುನ್ನ ಸರ್ಕಾರಿ ಹುದ್ದೆ ಭರ್ತಿ ಮಾಡುವ ಹುನ್ನಾರ ಕಾಂಗ್ರೆಸ್‌ನದ್ದು. ಹೆಚ್.ಸಿ.ಮಹದೇವಪ್ಪ ತಮ್ಮ ಚೇಲಾಗಳ ಮೂಲಕ ನಮ್ಮ ಮೇಲೆ ಪ್ರಕರಣ ದಾಖಲು ಮಾಡಿಸುತ್ತಿದ್ದಾರೆ. ಆದ್ದರಿಂದ ಸಚಿವ ಮಹದೇವಪ್ಪಗೆ ನೇರ ಸವಾಲು ಹಾಕುತ್ತೇವೆ. ಮಹದೇವಪ್ಪ ಏನು ದೊಡ್ಡ ವ್ಯಕ್ತಿ ಅಲ್ಲ. ನಮ್ಮ ಮೇಲೆ ಇನ್ನು ನೂರು ಕೇಸ್ ಹಾಕಲಿ. ಇಂತಹ ಎಷ್ಟೇ ಕೇಸ್‌ಗಳನ್ನ ಹಾಕಿದ್ರು ನಾವು ಹೆದರಲ್ಲ. ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾಗ ಮಹದೇವಪ್ಪ ತೀರ್ಥ ತೆಗೆದುಕೊಳ್ಳದೇ ಬಂದ್ರಿ. ನಮ್ಮ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಆಗಿದೆ. ನಮ್ಮ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ನಿಮ್ಮ ಮೇಲೂ ಕೇಸ್ ಹಾಕುತ್ತೇವೆ ಎಂದು ವಕೀಲ ಅರುಣ್ ಕುಮಾರ್ ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಒಳ ಮೀಸಲಾತಿ ಹೋರಾಟ ಸಮಿತಿ ಸದಸ್ಯ ಭಾಸ್ಕರ್ ಪ್ರಸಾದ್ ಅವರು, ಒಳ ಮೀಸಲಾತಿ ಹಾಕಿಗಾಗಿ ನಮ್ಮ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟಕ್ಕೆ ಹೆದರಿರುವ ಸರ್ಕಾರ ಈಗ ನಮ್ಮ ಸಮುದಾಯದವರನ್ನೇ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ಎಂಎಲ್‌ಸಿ ತಿಮ್ಮಯ್ಯ ಒಬ್ಬ ಪೇಮೆಂಟ್ ಗಿರಾಕಿ. ಇಂತಹವರು ನಮ್ಮ ಸಮುದಾಯದ ಕುಲಕಂಟಕರು. ಪೊಲೀಸ್‌ನವರು ಕಾನೂನಿನ ಪ್ರಕಾರ ಕೆಲಸ ಮಾಡಬೇಕು. ಮಹದೇವಪ್ಪ, ತಿಮ್ಮಯ್ಯ ದೂರು ಕೊಟ್ರೆ ಕೇಸ್ ಹಾಕ್ತಿರಿ. ನಾವು ದೂರು ಕೊಟ್ರೆ ಪ್ರಕರಣ ದಾಖಲು ಮಾಡಲ್ಲ.
ಹೆಚ್.ಸಿ.ಮಹದೇವಪ್ಪ, ತಿಮ್ಮಯ್ಯ ನೀವು ಕಾಂಗ್ರೆಸ್‌ನ ಮಕ್ಕಳಾದ್ರೆ ನಮ್ಮ ಹೋರಾಟ ತಡೆಯುವ ಕೆಲಸ ಮಾಡಿ. ಮುಂದಿನ ಚುನಾವಣೆಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Tags:
error: Content is protected !!