Mysore
15
scattered clouds

Social Media

ಬುಧವಾರ, 21 ಜನವರಿ 2026
Light
Dark

ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ದೂರು: ರಾಜ್ಯಾಧ್ಯಕ್ಷರಿಗೆ ದೂರು ಪತ್ರ ರವಾನಿಸಿದ ಎಲ್‌.ನಾಗೇಂದ್ರ

ಮೈಸೂರು: ಪಕ್ಷದ ಇಬ್ಬರು ಕಾರ್ಯಕರ್ತರು ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ಜಿಲ್ಲಾಧ್ಯಕ್ಷರಿಗೆ ದೂರು ನೀಡಿದ್ದಾರೆ. ಅದರನ್ವಯ ನಾವು ದೂರನ್ನು ರಾಜ್ಯಾಧ್ಯಕ್ಷರಿಗೆ ರವಾನೆ ಮಾಡಿದ್ದೇವೆ ಎಂದು ಬಿಜೆಪಿ ಮೈಸೂರು ಜಿಲ್ಲಾಧ್ಯಕ್ಷ ಎಲ್‌.ನಾಗೇಂದ್ರ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರು ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ದೂರು ನೀಡಿದ್ದು, ಈ ಸಂಬಂಧ ಕ್ರಮ ತೆಗೆದುಕೊಳ್ಳುವುದು ರಾಜ್ಯ ನಾಯಕರಿಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ನಮ್ಮಲ್ಲಿ ಗುಂಪುಗಳಿಲ್ಲ. ಹಸು ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಮೋರ್ಚಾ ಮತ್ತು ಪಕ್ಷದ ವತಿಯಿಂದಲೂ ಮೈಸೂರಿನಲ್ಲಿ ಪ್ರತಿಭಟನೆ ಮಾಡಿದ್ದೇವು. ಆ ಪ್ರತಿಭಟನೆಗೆ ಪ್ರತಾಪ ಸಿಂಹ ಅವರಿಗೂ ಆಹ್ವಾನ ನೀಡಿದ್ದೆವು. ಆದರೆ ಅವರು ಬರಲಿಲ್ಲ ಎಂದರು.

ಮುಂಚೆ ಎಂಪಿ ಆಗಿದ್ದಾಗ ಪ್ರತಾಪ್‌ ಸಿಂಹ ತುಂಬಾ ಬ್ಯೂಸಿ ಆಗಿದ್ದರು. ಅವರು ಹಸುವಿಗೆ ಪೂಜೆ ಮಾಡಿ ನಂತರ ಗೋ ಮಾತೆ ಕೆಚ್ಚಲು ಕೊಯ್ದ ಪ್ರಕರಣ ಖಂಡಿಸಿ ಪ್ರತಿಭಟನೆ ಮಾಡಿರಬಹುದು. ಇದು ಪಕ್ಷದ ವತಿಯಿಂದ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

Tags:
error: Content is protected !!