Mysore
27
scattered clouds

Social Media

ಬುಧವಾರ, 21 ಜನವರಿ 2026
Light
Dark

ಬಾನು ಮುಷ್ತಾಕ್ ನಮ್ಮ ಸಂಪ್ರದಾಯದ ರೀತಿ ದಸರಾ ಉದ್ಘಾಟನೆ ಮಾಡಿದ್ದಾರೆ: ಶಾಸಕ ಶ್ರೀವತ್ಸ

ಮೈಸೂರು: ನಿನ್ನೆ ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಾವುದೇ ವಿರೋಧ ತೋರದಂತೆ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾನು ಮುಷ್ತಾಕ್‌ ಅವರ ಮಂಡ್ಯ ಹೇಳಿಕೆಗೆ ಮಾತ್ರ ನಮ್ಮ ವಿರೋಧ ಇತ್ತು. ನಿನ್ನೆ ದಸರಾ ಉದ್ಘಾಟನೆಯಲ್ಲಿ ಯಾವ ರೀತಿ ನೆಡೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಬಾನು ಮುಷ್ತಾಕ್ ನಮ್ಮ ಸಂಪ್ರದಾಯದ ರೀತಿ ದಸರಾ ಉದ್ಘಾಟನೆ ಮಾಡಿದ್ದಾರೆ. ಬಾನು ಮುಷ್ತಾಕ್‌ ಅವರನ್ನು ವೈಯಕ್ತಿಕವಾಗಿ ಅಥವಾ ಅವರ ಧರ್ಮವನ್ನು ವಿರೋಧ ಮಾಡಿಲ್ಲ. ಅವರ ಮಂಡ್ಯ ಹೇಳಿಕೆಗೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದೆವು. ನಿನ್ನೆ ಯಾವುದೇ ವಿರೋಧ ತೋರದಂತೆ ನಡೆದುಕೊಂಡಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: Mysuru Dasara | ದೀಪಾಲಂಕಾರ ಕಣ್ತುಂಬಿಕೊಂಡ ಜನಸಾಗರ

ಇನ್ನು ನಿನ್ನೆಯ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಗುರಿಯಾಗಿಸಿಕೊಂಡು ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 10 ದಿನಗಳ ನಾಡಹಬ್ಬದಲ್ಲಿ ರಾಜಕೀಯ ಹೊರತುಪಡಿಸಿ ದಸರಾ ಮಾಡಲಿ ಎನ್ನುವುದು ನನ್ನ ಆಶಯ. ಇದರ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡುವುದಿಲ್ಲ.

ದಸರಾ ಮುಗಿದ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

Tags:
error: Content is protected !!