ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿರುವ ಬೆನ್ನಲ್ಲೇ ಅವಘಡವೊಂದು ಸಂಭವಿಸಿದೆ.
ಚಾಮುಂಡಿಬೆಟ್ಟದ ಶಿಚಾರ್ಚಕರಾದ ವಿ.ರಾಜು ಅವರು ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ತಾಯಿ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಕೆಲಕಾಲ ನಿರ್ಬಂಧ ವಿಧಿಸಲಾಗಿದೆ. ಕಳೆದ ತಡರಾತ್ರಿ ಚಾಮುಂಡಿಬೆಟ್ಟದ ಶಿವಾರ್ಚಕ ವಿ.ರಾಜು ನಿಧನರಾಗಿದ್ದಾರೆ.
ಇದನ್ನ ಓದಿ: ಮಡಿಕೇರಿ ದಸರಾ ಮಹೋತ್ಸವದಲ್ಲಿ ನಾಳೆ ಕಾಫಿ ಘಮಲು
ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ತಾಯಿ ಚಾಮುಂಡಿದೇವಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮಧ್ಯಾಹ್ನದವರೆಗೂ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ ಸಂಸ್ಕಾರ ಮುಗಿದ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.





