ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಚಾಮುಂಡಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ.
ಚಾಮುಂಡಿ ಹಬ್ಬದ ಪ್ರಯುಕ್ತ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಭಕ್ತರು ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು. ಭಕ್ತರಿಗಾಗಿಯೇ ವೆಜ್ ಹಾಗೂ ನಾನ್ ವೆಜ್ ಊಟ ನೀಡಲಾಗುತ್ತಿದ್ದು, ಬೆಟ್ಟದ ಪಾದದ ಬಳಿ ಕುರಿ ಕೋಳಿ ಕಡಿದು ಹಬ್ಬ ಆಚರಣೆ ಮಾಡಲಾಗುತ್ತಿದೆ.
ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದಿಂದಲೂ ಚಾಮುಂಡಿ ದೇವಿಯ ಹಬ್ಬ ಆಚರಣೆ ಮಾಡಲಾಗಿದ್ದು, ಬೆಟ್ಟದ ಪಾದದ ಬಲಿ ಸುಮಾರು 15 ಸಾವಿರ ಜನರಿಗೆ ನಾನ್ ವೆಜ್ ಊಟ ವಿತರಣೆ ಮಾಡಲಾಗಿದೆ.
ದಿನವಿಡೀ ವಿದ್ಯುತ್ ಕಂಬಗಳಲ್ಲಿ ಕೆಲಸ ಮಾಡುವ ನಮಗೆ ತಾಯಿ ಚಾಮುಂಡೇಶ್ವರಿ ಸದಾ ಕಾವಲಾಗಿರಲಿ ಹಾಗೂ ಯಾವಾಗಲು ನಮ್ಮ ಮೇಲೆ ದೇವಿಯ ಆಶೀರ್ವಾದ ಇರಲಿ ಎಂದು ಪ್ರತಿ ವರ್ಷ ಪೂಜೆ ಮಾಡುತ್ತಿದ್ದೇವೆ. ಬರುವ ಭಕ್ತರಿಗೆ ವೆಜ್ ಹಾಗೂ ನಾನ್ ವೆಜ್ ಊಟ ನೀಡುತ್ತಿದ್ದೇವೆ ಎಂದು ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.





