ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಂದು ಸೆಲೆಬ್ರಿಟಿಸ್ ಕ್ರಿಕೆಟ್ ಕಲರವ ಶುರುವಾಗಲಿದ್ದು, ತಮ್ಮ ನೆಚ್ಚಿನ ಸೆಲೆಬ್ರಿಟಿಸ್‌ಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ಕಾತುರರಾಗಿದ್ದಾರೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಸಿಸಿಎಲ್ ಸೆಮಿ ಫಿನಾಲೆ ಹಾಗೂ ಫೈನಲ್ಸ್ ಪಂದ್ಯ ವೀಕ್ಷಣೆಗೆ ಜನರು ಕಾತುರದಿಂದ ಕಾಯುತ್ತಿದ್ದಾರೆ. ಪಂಜಾಬ್ ದೆ ಷೇರ್, ಬೆಂಗಾಲ್ ಟೈಗರ್ಸ್, ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚನ್ನೈ ರೈನೋರ್ಸ್ ತಂಡ ಸೆಮಿ ಫೈನಲ್ಸ್ ಪ್ರವೇಶಿಸಿವೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಬೆಂಗಾಲ್ ಟೈಗರ್ಸ್ ಹಾಗೂ ಪಂಬಾಬ್ ದೆ ಷೇರ್ ನಡುವೆ ಮೊದಲ ಸೆಮಿ ಫಿನಾಲೆ ನಡೆಯಲಿದೆ. ಸಂಜೆ 6:30ರಿಂದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನೈ ರೈನೋರ್ಸ್ ನಡುವೆ ಎರಡನೇ ಸೆಮಿ ಫೈನಲ್ಸ್ ನಡೆಯಲಿದ್ದು, ಈ ಪಂದ್ಯಗಳನ್ನು ವೀಕ್ಷಿಸಲು ಜನರು ಉತ್ಸುಕರಾಗಿದ್ದಾರೆ.





