ಮೈಸೂರು: ನಾಳೆಯಿಂದ ಜಾತಿಗಣತಿ ಸಮೀಕ್ಷೆ ಆರಂಭವಾಗಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ದಸರಾ ಸಮಯದಲ್ಲಿ ಜನರು ಬೇರೆಡೆ ಹೋಗುತ್ತಾರೆ. ಇಂತಹ ವೇಳೆಯಲ್ಲಿ ದತ್ತಾಂಶ ಸಂಗ್ರಹ ಸಾಧ್ಯವಿಲ್ಲ. ಮನೆ ಮನೆಗೆ ಹೋಗಿ ಗಣತಿ ಮಾಡಲು ಆಗುವುದಿಲ್ಲ. ಆದ್ದರಿಂದ ಕೇವಲ ರಾಜಕೀಯಕ್ಕಾಗಿ ಕಾಂಗ್ರೆಸ್ ಜಾತಿಗಣತಿ ಸಮೀಕ್ಷೆ ಮಾಡುತ್ತಿದೆ. ಈ ಸಮಯದಲ್ಲಿ ಜಾತಿಗಣತಿ ಸಮೀಕ್ಷೆ ಮಾಡುವುದು ಸರಿಯಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಇನ್ನು ಲೇಖಕಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾಳೆ ದಸರಾ ಉದ್ಘಾಟನೆ ಆಗಲಿ. ಪ್ರಸ್ತುತ ರಾಜಕೀಯಕ್ಕೂ ಇದಕ್ಕೂ ಸಂಬಂಧ ಇಲ್ಲ. 2023ರಲ್ಲಿ ಕನ್ನಡ ವೇದಿಕೆ ಹೇಳಿಕೆ ವಿರುದ್ಧ ನಮ್ಮ ವಿರೋಧ ಇತ್ತು. ನಾಳಿನ ವೇದಿಕೆಯಲ್ಲಿ ಯಾರ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುಲಿ ಎನ್ನುವುದು ನಮ್ಮ ಆಗ್ರಹ.
ನಾಳಿನ ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಭಾಗಿಯಾಗಲ್ಲ. ಯಾಕೆಂದರೆ ನನಗೆ ಅರಮನೆಯಲ್ಲಿ ಕಂಕಣ ಕಟ್ಟಿರುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳು ಇರುತ್ತವೆ. ಹಾಗಾಗಿ ನಾನು ಭಾಗಿಯಾಗಲ್ಲ ಎಂದು ಹೇಳಿದರು.





