Mysore
25
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಜಾತಿಗಣತಿ ಅನ್ನೋದು ಅವೈಜ್ಞಾನಿಕ: ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

shobha karandlaje

ಮೈಸೂರು: ಜಾತಿಗಣತಿ ಅನ್ನೋದು ಅವೈಜ್ಞಾನಿಕ. ಲಿಂಗಾಯಿತ, ಒಕ್ಕಲಿಗ ಸೇರಿದಂತೆ ಜನರನ್ನು ಒಡೆಯುವ ತಂತ್ರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ಒಳಿತಾಗಲಿ. ಪ್ರಧಾನಿ ಮೋದಿ ಕೈ ಬಲಗೊಳ್ಳಲಿ ಎಂದು ಪ್ರತಿ ಬಾರಿಯಂತೆ ಈ ಬಾರಿಯು 1001 ಮೆಟ್ಟಿಲು ಏರಿ ತಾಯಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದೇನೆ. ನಾಳೆ ಮಾವುತರ ಜೊತೆ ಉಪಹಾರ ಸೇವಿಸುತ್ತೇನೆ ಎಂದರು.

ಇದನ್ನು ಓದಿ : ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ: ಜಿಲ್ಲಾಧಿಕಾರಿ ಡಾ.ಕುಮಾರ

ಇನ್ನು ರಾಜ್ಯದಲ್ಲಿ ಅತಿವೃಷ್ಠಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಪರಿಹಾರ ನೀಡುತ್ತಿಲ್ಲವೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಯಾವಾಗ ಎಲ್ಲಿ ಯಾರಿಗೆ ಪರಿಹಾರ ನೀಡಿದೆ ಹೇಳಿ.? ಬರಿ ರಸ್ತೆಗುಂಡಿಗಳನ್ನೇ ಮುಚ್ಚಲು ಸಾದ್ಯವಾಗಲಿಲ್ಲ. ಜನ ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ನೀಡುತ್ತಿದೆ. ಆದ್ರೆ ರಾಜ್ಯ ಸರ್ಕಾರದ ಬಳಿ ಅಕ್ಕಿ ಸಾಗಿಸುವ ಲಾರಿಗಳಿಗೆ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಕಂಟ್ರ್ಯಾಕ್ಟರ್‌ಗಳು 80 ಪರ್ಸೆಂಟ್ ಭ್ರಷ್ಟಾಚಾರ ಎಂದು ಹೇಳುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದೆ ಜನರಿಗೆ ಪರಿಹಾರ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಎಲ್ಲವನ್ನೂ ತಿಂದು ತೇಗುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಇನ್ನು ಜಾತಿಗಣತಿ ಅನ್ನೋದು ಅವೈಜ್ಞಾನಿಕ. ಲಿಂಗಾಯಿತ, ಒಕ್ಕಲಿಗ ಸೇರಿದಂತೆ ಜನರನ್ನು ಒಡೆಯುವ ತಂತ್ರವಾಗಿದೆ. 7 ಕೋಟಿ ಜನರ ಗಣತಿ ಕಡಿಮೆ ಅವಧಿಯಲ್ಲಿ ಮಾಡಲು ಸಾಧ್ಯನಾ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 

 

Tags:
error: Content is protected !!