ಮೈಸೂರು: ಮುಡಾದವರು ಏಕಾಏಕಿ ಬಡವರ ಮನೆಗೆ ಬಂದು ಯಾವುದೇ ನೋಟಿಸ್ ನೀಡದೇ ತೆರವು ಮಾಡಿದ್ದು, ಸರ್ವೇ ನಂಬರ್ 108, 109 ಜಾಗವು 2002ರಲ್ಲಿ ಭೂ ಸ್ವಾಧೀನವಾಗಿದೆ ಎಂದು ವಕೀಲ ಹೃತಿಕ್ ಗೌಡ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಂಚೆ ಈ ಜಾಗ ಬಸವನಹಳ್ಳಿ ಗ್ರಾಮಕ್ಕೆ ಸೇರಿತ್ತು. ಇದೀಗ ವಿಜಯನಗರ 4ನೇ ಹಂತಕ್ಕೆ ಬಡಾವಣೆ ಮಾಡಲು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಬಂದು ಜಾಗ ತೆರವಿಗೆ ಮುಂದಾಗಿದ್ದಾರೆ. ಜಾಗಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿಯಿದೆ ಎಂದು ಮಾಹಿತಿ ನೀಡಿದರು.
ರಿಟ್ ಅರ್ಜಿ 1427/2024 ಹೈಕೋರ್ಟ್‌ನಲ್ಲಿ ಪೆಂಡಿಂಗ್ ಇದೆ. ಆದರೂ ಏಕಏಕಿ ಬಂದು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದಾರೆ. 25 ವರ್ಷಗಳಿಂದ ಖಾತೆ, ಕಂದಾಯ, ಎಲೆಕ್ಟ್ರಿಕಲ್ ಬಿಲ್ ಎಲ್ಲವು ಸಹ ವಾಸವಿರುವವರ ಹೆಸರಿನಲ್ಲಿದೆ. ಕಾನೂನಿನ್ವಯ ಈ ಜಾಗದಲ್ಲಿ ವಾಸವಿದ್ದಾರೆ. ಪ್ರಕರಣ ಯಾವುದೇ ನ್ಯಾಯಾಲಯದಲ್ಲೂ ಬಾಕಿ ಇರುವ ವೇಳೆ ಕಾನೂನಿನ್ವಯ ವಾಸಿಸುವ ಜನರನ್ನು ಹೊರದೂಡುವಂತಿಲ್ಲ. 2004ರ ತನಕ ಆರ್‌ಟಿಸಿ ಇದ್ದು ಪುಟ್ಟಮಾದಯ್ಯ ಎನ್ನುವವರಿಂದ ಬಂದಿರುವ ಜಾಗಕ್ಕೆ ಮೂವರು ಮಂದಿ ಮೊಮ್ಮಕ್ಕಳು ವಾರಸುದಾರರಾಗಿದ್ದಾರೆ.
ಹೈಕೋರ್ಟ್‌ನ ಡಬಲ್ ಬೆಂಚ್‌ನಲ್ಲಿ ಪ್ರಕರಣ ಪೆಂಡಿಂಗ್ ಇದೆ. ಆದರೂ ಸಹ ಮುಡಾ ಅಧಿಕಾರಿಗಳು ಲೆಕ್ಕಕ್ಕೆ ತೆಗೆದುಕೊಳ್ಳದೆ ಜಾಗ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.





