ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಇಂದು ಬೆಳಿಗ್ಗೆ ಮಠಕ್ಕೆ ಭೇಟಿ ನೀಡಿದ ಬಾನು ಮುಷ್ತಾಕ್ ಅವರಿಗೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶಾಲು, ಹಾರ ಹಾಗೂ ಪೇಟ ಹಾಕಿ ಸನ್ಮಾನಿಸಿದರು.
ಬಳಿಕ ಸುತ್ತೂರು ಶ್ರೀಗಳ ಜೊತೆ ಸಮಾಲೋಚನೆ ನಡೆಸಿದ ಬಾನು ಮುಷ್ತಾಕ್ ಅವರು, ಕೃತಿಗಳ ಬಗ್ಗೆಯೂ ಕೆಲಕಾಲ ಚರ್ಚೆ ನಡೆಸಿದರು. ತದನಂತರ ಮಠದಲ್ಲೇ ಬೆಳಗಿನ ಉಪಹಾರ ಸೇವಿಸಿ ಖುಷಿಪಟ್ಟರು.





