Mysore
24
overcast clouds

Social Media

ಮಂಗಳವಾರ, 24 ಜೂನ್ 2025
Light
Dark

ಬಿಜೆಪಿ ವಿಶ್ವದ ದೊಡ್ಡ ರಾಜಕೀಯ ಪಕ್ಷ : ಎಲ್ ನಾಗೇಂದ್ರ

ಮೈಸೂರು: ಭಾರತೀಯ ಜನತಾ ಪಕ್ಷ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ದೇಶದಲ್ಲಿ ಸದೃಢ ಹಾಗೂ ಸಮರ್ಥ ಆಡಳಿತ ನೀಡುತ್ತಿದೆ. ಬಿಜೆಪಿಯ ರಾಷ್ಟ್ರೀಯ ಸದಸ್ಯತ್ವ ಅಭಿಯಾನ ಮತ್ತೊಂದು ದಾಖಲೆಯಾಗಲಿ ಎಂದು ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಡೆದ ಅಭಿಯಾನದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಅತಿ ದೊಡ್ಡ -ರಾಜಕೀಯ ಪಕ್ಷವಾಗಿರುವ ಬಿಜೆಪಿಯ ಸದಸ್ಯತ್ವ ಪಡೆಯುವುದೇ ಹೆಮ್ಮೆಯ ಸಂಗತಿ, ಕಾರ್ಯಕರ್ತರು ಪ್ರತಿ ಬೂತಿನಲ್ಲೂ ಸದಸ್ಯತ್ವ ನೋಂದಣಿ ನಡೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕರಾಜ್, ಪ್ರಧಾನ ಕಾರ್ಯದರ್ಶಿ  ಗಿರೀಧರ್, ಬಿ ಎಂ ರಘು, ಉಪಾಧ್ಯಕ್ಷರಾದ ರಮೇಶ್, ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಟಿ ಎನ್ ಶಾಂತ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಸದಸ್ಯತ್ವ ಅಭಿಯಾನದ ಸಂಚಾಲಕರಾದ ವಿಧ್ಯಾಅರಸ್, ಕಾರ್ಯದರ್ಶಿ ನಾಗೇಂದ್ರ ಸಹಾ ಸಂಚಾಲಕರಾದ ಜಾನ್ಸಿ ಹಾಗೂ ಅನಿತ ಮತ್ತು ಮಹಿಳಾ ಮೋರ್ಚಾ ಕ್ಷೇತ್ರಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Tags:
error: Content is protected !!