ಮೈಸೂರು: ನಾಟ್ಯ ಸಂಸ್ಕೃತಿ ಕಲಾನಿಕೇತನದ ವತಿಯಿಂದ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೈಸೂರಿನ ನಿವೇದಿತ ನಗರದ ಎಸ್.ಆರ್.ಸುಬ್ಬರಾವ್ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರ ಪ್ರಾಥಮಿಕ ಹಂತದಿಂದ ಪಠ್ಯಕ್ರಮದಲ್ಲಿ ಕಲೆ, ಸಂಸ್ಕೃತಿಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಬಳಿಕ ನಾಟ್ಯ ಸಂಸ್ಕೃತಿ ಕಲಾನಿಕೇತನ ವತಿಯಿಂದ ಏರ್ಪಡಿಸಿದ್ದ 50 ವಿದ್ಯಾರ್ಥಿಗಳಿಗೆ ಯೂನೀಕ್ ಬುಕ್ ಆಫ್ ವಲ್ಡ್ ರೆಕಾರ್ಡ್ ಪ್ರಮಾಣ ಪತ್ರ ವಿತರಿಸಿ ಖುಷಿಪಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಜಿ.ಎಸ್.ಗಣೇಶ್, ವಿದುಷಿ ಎಸ್.ಎನ್ ಮೇಘನಾರಾವ್ ಹಾಗೂ ಅವರ ಮಗ ಭರತ್ ಶರ್ಮಾ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.