ಮೈಸೂರು: ನನಗೆ ಬೂಕರ್ ಪ್ರಶಸ್ತಿ ಬಂದು ಎರಡು ತಿಂಗಳಾಗಿದ್ದು, ಎಲ್ಲರೂ ಸಂಭ್ರಮ ಪಡುತ್ತಿದ್ದಾರೆ ಎಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು, ಪ್ರಶಸ್ತಿ ಬಂದು ಎರಡು ತಿಂಗಳು ಆಯ್ತು. ಎಲ್ಲರೂ ಸಂಭ್ರಮ ಪಡುತ್ತಿದ್ದಾರೆ. ನನಗೂ ತುಂಬಾ ಖುಷಿ ಆಗಿದೆ. ಸುತ್ತೂರು ಮಠದವರು ನನ್ನನ್ನು ಯಾವಾಗಲೂ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಅದಕ್ಕಾಗಿ ಈಗಲೂ ನನ್ನನ್ನು ಕರೆದು ಸನ್ಮಾನ ಮಾಡಿದ್ದಾರೆ. ಹಾಗಾಗಿ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.
ಇನ್ನು ಈ ಬಾರಿ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೂಸು ಹುಟ್ಟೋ ಮೊದಲೇ ಕುಲಾವಿ ಒಲೆಸಬಾರದು. ಈ ಬಗ್ಗೆ ನನಗೆ ಏನೂ ಕೂಡ ಗೊತ್ತಿಲ್ಲ ಎಂದು ಹೇಳಿದರು.
ಇನ್ನು ಬೂಕರ್ ಪ್ರಶಸ್ತಿ ಬಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಶ್ ಮಾಡಿದ್ರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಮೋದಿ ಅವರು ವಿಶ್ ಮಾಡಿಲ್ಲ. ವಿಶ್ ಮಾಡ್ತಾರೆ ಅನ್ಕೊಂಡಿದ್ದೀನಿ ಎಂದರು.





