Mysore
30
overcast clouds

Social Media

ಮಂಗಳವಾರ, 11 ಆಗಸ್ಟ್ 2026
Light
Dark

ಖಾಲಿ ಕಾಂಪೌಂಡ್‌ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುವವರೇ ಎಚ್ಚರ ಎಚ್ಚರ.

ನಿಮ್ಮ ತಪ್ಪನ್ನು ನಿಮಗೇ ತೋರಿಸಲಿದೆ ಕನ್ನಡಿ!

ಮೈಸೂರು: ಖಾಲಿ ಕಾಂಪೌಂಡ್ ಬಳಿ ಮೂತ್ರ ವಿಸರ್ಜನೆಯ ದುರ್ವಾಸನೆ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್ ಪ್ಲಾನ್ ಮಾಡಿದ್ದು, ಪ್ರಾಯೋಗಿಕವಾಗಿ ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಕಾಂಪೌಂಡ್‌ಗೆ ರಿಫ್ಲಕ್ಷನ್ ಕನ್ನಡಿ ಅಳವಡಿಸಲಾಗಿದೆ.

80 ಮೀಟರ್ ಕಾಂಪೌಂಡ್‌ಗೆ ಸ್ಟೇನ್ ಲೆಸ್ ಸ್ಟೀಲ್ ರಿಫ್ಲೆಕ್ಷನ್ ಅಳವಡಿಸಿದ್ದು ಸ್ಟೇನ್ ಲೆಸ್ ಸ್ಟೀಲ್ ಮೂಲಕ ಕನ್ನಡಿ‌ಯ ಮಾದರಿ ಪ್ರತಿಬಿಂಬ ಕಾಣುವಂತೆ ಉಪಾಯ ಮಾಡಲಾಗಿದೆ.

ಅದರ‌ ಮುಂದೆ ನಿಂತರೆ ಸಂಪೂರ್ಣ ಚಿತ್ರಣ ಹಿಂಬದಿಯವರಿಗೆ ಕಾಣುವಂತೆ ಮಾಡಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಗಬ್ಬು ವಾಸನೆ ತರುತ್ತಿದ್ದವರನ್ನು‌ ತಡೆಯಲು ಈ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ.

ಕನ್ನಡಿಯ ಸುತ್ತ ಎಲ್ಇಡಿ ಲೈಟ್ ಕೂಡಾ ಇದ್ದು, ಸಂಜೆ ವೇಳೆ ಸ್ಟ್ರೀಟ್ ಲೈಟ್ ಹೊತ್ತಿಕೊಳ್ಳುತ್ತಿದ್ದಂತೆ ಬಲ್ಬ್ ಕೂಡ ಆನ್ ಆಗುತ್ತದೆ. ಸುಮಾರು 9.5 ಲಕ್ಷ ವೆಚ್ಚದಲ್ಲಿ ಜಾರಿಗೆ ತಂದಿರುವ ಈ ಯೋಜನೆ ಸದ್ಯಕ್ಕೆ ಮೈಸೂರಿನಲ್ಲಿ ಮೊದಲು ಜಾರಿಯಾಗಿದೆ. ನಗರ ಪಾಲಿಕೆಯ ನೂತನ ಪ್ಲಾನ್‌ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗೋಡೆ ಕಂಡೊಡನೆ ಮೂತ್ರಿಸುವವರು ಮಾತ್ರ ಇನ್ಮುಂದೆ ಯೋಚಿಸಬೇಕಾಗಿದೆ!

 

Tags:
error: Content is protected !!