ಮೈಸೂರು : ಉಳುಮೆ ಪ್ರತಿಷ್ಠಾನದ ವತಿಯಿಂದ ಡಿ.೧೩ ಮತ್ತು ೧೪ರಂದು ಬೋಗಾದಿ-ಗದ್ದಿಗೆ ರಸ್ತೆಯ ಬನವಾಸಿ ತೋಟದಲ್ಲಿ ಅರಿವಿನ ಚಾವಡಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಿ.೧೩ರಂದು ಬೆಳಿಗ್ಗೆ ೧೦ ಗಂಟೆಯಿಂದ ೧೧.೧೫ರವರೆಗೆ ‘ಭಾರತದ ಸಂವಿಧಾನ’ ಕುರಿತು ಡಾ.ಶಿವಕುಮಾರ್ ಉಪನ್ಯಾಸ ನೀಡುವರು, ಎನ್.ಇಂದಿರಮ್ಮ ಪ್ರತಿಕ್ರಿಯೆ ನೀಡುವರು. ಬೆಳಿಗ್ಗೆ ೧೧.೧೫ಕ್ಕೆ ಪ್ರೊ.ರಹಮತ್ ತರೀಕೆರೆ ಅವರು ‘ನಾಗರಿಕತೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಹೋರಾಟ’ ವಿಷಯ ಮಂಡಿಸುವರು. ಹಾರೋಹಳ್ಳಿ ಪ್ರಕಾಶ ಪ್ರತಿಕ್ರಿಯೆ ನೀಡುವರು.
ಮಧ್ಯಾಹ್ನ ೧೨.೩೦ಕ್ಕೆ ‘ಉದ್ಯಮಶೀಲತೆ ಚಳವಳಿ: ಒಳನೋಟ’ದ ಕುರಿತು ಬಿ.ಶ್ರೀಪಾದ ಭಟ್ ಮಾತನಾಡಿದರೆ, ವರಹಳ್ಳಿ ಆನಂದ್ ಪ್ರತಿಕ್ರಿಯೆ ನೀಡುವರು. ಮಧ್ಯಾಹ್ನ ೨.೩೦ಕ್ಕೆ ಎಚ್.ಎಂ.ರುದ್ರಸ್ವಾಮಿ ಅವರು ‘ದಸಂಸ ನಡೆದು ಬಂದ ಹಾದಿ ಮತ್ತು ಮುಂದಿನ ನಡೆ’ ಕುರಿತು ಮಾತನಾಡಿದರೆ ಆಲಗೂಡು ಶಿವಕುಮಾರ್ ಪ್ರತಿಕ್ರಿಯೆ ನೀಡುವರು.
ಇದನ್ನೂ ಓದಿ:-ಕಾಂಗ್ರೆಸ್ ಆಯ್ತು ಇದೀಗ ಬಿಜೆಪಿ ಸರದಿ : ದಿಲ್ಲಿ ತಲುಪಿದ ಬಿಜೆಪಿ ಪ್ರತ್ಯೇಕ ಬಣ
ಮಧ್ಯಾಹ್ನ ೩.೪೫ಕ್ಕೆ ‘ಗ್ರಾಮಸಭೆಗಳ ಮಹತ್ವ’ ಕುರಿತು ರಾಜಾ ಹುಣಸೂರು ವಿಷಯ ಮಂಡಿಸಿದರೆ, ಯದುನಾಡ ನಾಗರಾಜ್ ಪ್ರತಿಕ್ರಿಯೆ ನೀಡುವರು. ಸಂಜೆ ೫ಕ್ಕೆ ಆರ್.ಸಂತೋಷ್ ನಾಯಕ್ ಅವರೊಂದಿಗೆ ‘ಪುಸ್ತಕ, ಓದು, ಚರ್ಚೆ, ಸಂವಾದ’ ನಡೆಯಲಿದೆ.
ಡಿ.೧೪ರಂದು ಬೆಳಿಗ್ಗೆ ೯ಕ್ಕೆ ‘ಜಾಗತೀಕರಣವೋ? ಮರುವಸಾಹಾತೀಕರಣವೋ’ ವಿಷಯ ಕುರಿತು ಎಚ್.ಎಸ್.ಶಿವಸುಂದರ್ ವಿಷಯ ಮಂಡಿಸುವರು, ಬಿ.ಡಿ.ಶಿವಬುದ್ಧಿ ಪ್ರತಿಕ್ರಿಯೆ ನೀಡುವರು. ಬೆಳಿಗ್ಗೆ ೧೦.೧೫ಕ್ಕೆ ಐಪಿಎಸ್ ಅಧಿಕಾರಿ ಡಾ.ಬಿ.ಟಿ.ಕವಿತಾ ಅವರು ‘ಯುವ ಜನತೆಗೆ ಕಾನೂನು’ ವಿಷಯ ಮಂಡಿಸುವರು.
ಬೆಳಿಗ್ಗೆ ೧೧.೩೦ಕ್ಕೆ ಕೆಎಎಸ್ ಅಽಕಾರಿ ಮಂಜುನಾಥ್ ಸೋಸಲೆ ‘ಸ್ಪರ್ಧಾತ್ಮಕ ಪರೀಕ್ಷೆ’ ಕುರಿತು, ಮಧ್ಯಾಹ್ನ ೧.೩೦ಕ್ಕೆ ಬಡಗಲಪುರ ನಾಗೇಂದ್ರ ‘ರೈತ ಸಂಘ ನಡೆದು ಬಂದ ಹಾದಿ ಮತ್ತು ಮುಂದಿನ ನಡೆ’ ಕುರಿತು ವಿಷಯ ಮಂಡಿಸಿದರೆ ಜೆ.ಎಂ.ವೀರಸಂಗಯ್ಯ ಪ್ರತಿಕ್ರಿಯೆ ನೀಡುವರು.
ಮಧ್ಯಾಹ್ನ ೨.೪೫ಕ್ಕೆ ಟಿ.ಜಿ.ಎಸ್. ಅವಿನಾಶ್ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಮತ್ತು ಸಂಜೆ ೪ಕ್ಕೆ ‘ಪ್ರಸ್ತುತ ರಾಜಕೀಯ: ನಮ್ಮ ನಿಲುವು’ ಕುರಿತು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ವಿಷಯ ಮಂಡಿಸುವರು. ಅಹಿಂದ ಜವರಪ್ಪ ಪ್ರತಿಕ್ರಿಯೆ ನೀಡುವರು. ಆಸಕ್ತರು ಹೆಚ್ಚಿನ ವಿವರಗಳಿಗೆ ಮೊ. ೮೧೯೭೮೫೬೧೩೨ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.





