ಮೈಸೂರು: ವೈದ್ಯರೊಬ್ಬರ ವರ್ತನೆಗೆ ಬೇಸತ್ತ ರೋಗಿಗಳು ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಚಿಕಿತ್ಸೆಗೆ ಬಂದ ರೋಗಿಗಳೇ ಪ್ರತಿಭಟನೆ ನಡೆಸಿದ್ದಾರೆ.
ವೈದ್ಯರ ವರ್ತನೆ ಸರಿಯಿಲ್ಲ ಎಂದು ಆರೋಪಿಸಿರುವ ರೋಗಿಗಳು, ವೈದ್ಯರನ್ನು ಬದಲಾಯಿಸಿ ಇಲ್ಲವೇ ಆಸ್ಪತ್ರೆಯನ್ನೇ ಮುಚ್ಚಿಸಿ ಎಂದು ಆಗ್ರಹಿಸಿದ್ದಾರೆ.
ವೈದ್ಯರು ರೋಗಿಗಳ ಜೊತೆ ಸರಿಯಗಿ ಸ್ಪಂದಿಸಲ್ಲ. ರೋಗಿಗಳನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ಡಿಎಚ್‌ಓ ಕುಮಾರಸ್ವಾಮಿ ಅವರು ತಕ್ಷಣವೇ ವೈದ್ಯರನ್ನು ಬದಲಾಯಿಸುವ ಭರವಸೆ ನೀಡಿದರು. ಬಳಿಕ ರೋಗಿಗಳು ಚಿಕಿತ್ಸೆ ಪಡೆಯದೇ ವಾಪಸ್ ತೆರಳಿದರು.





