Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ

ಮೈಸೂರು: ಪ್ರೇಯಸಿ ಮದುವೆಯಾಗಿ ದೂರವಾಗಿದ್ದಕ್ಕೆ ಲವರ್‌ ಬಾಯ್‌ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ.

ಮೈಸೂರು ತಾಲ್ಲೂಕಿನ ಯಲಚೇನಹಳ್ಳಿ ಗ್ರಾಮದ ವಿನಯ್‌ ಎಂಬಾತನೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದಾನೆ.

ವಿನಯ್‌ ಬಾಲ್ಯದಿಂದಲೂ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆ ಹುಡುಗಿಯೂ ಕೂಡ ವಿನಯ್‌ನನ್ನು ಬಾಲ್ಯದಿಂದಲೂ ಪ್ರೀತಿಸುತ್ತಿದ್ದಳು.

ಆದರೆ ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ ಮುಂದುವರಿದಿತ್ತು. ಈ ವಿಚಾರ ಕುಟುಂಬಸ್ಥರಿಗೆ ಗೊತ್ತಾದ ಹಿನ್ನೆಲೆಯಲ್ಲಿ ಅಂತಿಮವಾಗಿ ವಿನಯ್‌ನಿಂದ ಆಕೆ ದೂರವಾಗಿದ್ದಾಳೆ. ಇದರಿಂದ ಮನನೊಂದು ವಿನಯ್‌ ಪ್ರಾಣ ಕಳೆದುಕೊಂಡಿದ್ದಾನೆ.

ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ವಿನಯ್‌ ಮನೆಯವರು, ಈ ಸಾವಿಗೆ ಯುವತಿಯ ಮನೆಯವರೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಇಲವಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags: