Mysore
19
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಬೈಲಕುಪ್ಪೆಗೆ ಮಹಿಳಾ ಗುರೂಜಿ ಭೇಟಿ

ಬೈಲಕುಪ್ಪೆ : ಬೈಲಕುಪ್ಪೆ ಗೋಲ್ಡನ್ ಟೆಂಪಲ್‌ಗೆ ಟಿಬೆಟಿಯನ್ ಮಹಿಳಾ ಗುರೂಜಿಯವರಾದ ದೋರ್ಜಿ ಚೆನ್ನಿಂಗ್ ರಿಪೂಜಿರವರು ಶುಕ್ರವಾರ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ.

ಹತ್ತು ದಿನಗಳ ಕಾಲ ಇಲ್ಲೇ ತಂಗಲಿದ್ದು, ಬೈಲಕುಪ್ಪೆ ಸ್ಥಳೀಯ ಟಿಬೆಟಿಯನ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿವಿಧ ಮಂದಿರಗಳಿಗೆ ತೆರಳಿ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಟಿಡಿಎಲ್ ಮುಖ್ಯಸ್ಥ ನುಬು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಲಾಮ ಸನ್ಯಾಸಿಗಳು, ಹುಣಸೂರಿನ ಡಿವೈಎಸ್‌ಪಿ ರವಿ, ವೃತ್ತ ನಿರೀಕ್ಷಕ ದೀಪಕ್, ಬೈಲಕುಪ್ಪೆ ಪಿಎಸ್‌ಐಗಳಾದ ರವಿಕುಮಾರ್, ರವಿ, ಬೆಟ್ಟದಪುರ ಪಿಎಸ್‌ಐ ಅಜಯ್ ಕುಮಾರ್, ಸಿಬ್ಬಂದಿ ಹಾಜರಿದ್ದರು.

Tags:
error: Content is protected !!