ಅಮೆರಿಕಾ : ನ್ಯೂಯಾರ್ಕ್ ನಗರದಲ್ಲಿ ಭೂಕಂಪನವಾಗಿದ್ದು, ಅದರ ತೀವ್ರತೆಗೆ ಅಮೇರಿಕಾದ ಸ್ವಾತಂತ್ರದ ಪ್ರತಿಮೆ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಅಲುಗಾಡಿದೆ.
4.8 ತೀವ್ರತೆಯ ಭೂಕಂಪನದ ಅನುಭವವಾಗಿದ್ದು, ಭೂಮಿಯ ಕಂಪನದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಮೆ ಅಲುಗಾಡಿರುವ ದೇಶ್ಯ ವೈರಲ್ ಆಗಿದೆ.
ಅರ್ತ್ ಕ್ಯಾಮ್‌ನಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ ಅಮೆರಿಕಾದ ಸ್ವಾತಂತ್ರ್ಯದ ಪ್ರತಿಮೆ ಅಲುಗುತ್ತಿರುವ ದೃಶ್ಯ ವೈರಲ್ ಆಗಿದೆ. ನ್ಯೂಜೆರ್ಸಿಯ ಕ್ಯಾಲಿಫೋನ್ ಬಳಿ ಭೂಕಂಪದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಘಟನೆಯ ಸಮಯದಲ್ಲಿ ಎಲ್ಲಿಸ್ ದ್ವೀಪವು ಅಲುಗಾತ್ತಿರುವುದು ಕಾಣಿಸುತ್ತಿದೆ ಲೇಡಿ ಲಿಬರ್ಟಿಯ ಪ್ರತಿಮೆಯೂ ಭೂಕಂಪನದ ಸಮಯದಲ್ಲಿ ಕೆಲ ಸೆಕೆಂಡ್ ಅಲುಗುವುದನ್ನು ಕೂಡ ಈ ವೀಡಿಯೋದಲ್ಲಿ ನೋಡಬಹುದು.
ದಿನದ ಹಿಂದಷ್ಟೇ ಸ್ಟ್ಯಾಚ್ಯೂ ಆಫ್ ಲಿಬರ್ಟಿಗೆ ಸಿಡಿಲು ಬಡಿದಿತ್ತು. ಇದೀಗ ಭೂಮಿ ಕಂಪಿಸಿದ ಅನುಭವವಾಗಿದ್ದು, ಯಾವುದೇ ಹಾನಿಯಾಗಿಲ್ಲ.