ಬೆಂಗಳೂರು : ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮ್ಮಿಟ್ ವರ್ಚುವಲ್ ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ಡೀಪ್ ಫೇಕ್” ವೀಡಿಯೋಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎಐ (ಕೃತಕ ಬುದ್ದಿಮತ್ತರ) ದೊಡ್ಡ ಸಮಸ್ಯೆಯಾಗಿದ್ದು, ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಲು ಅವರು ಮಾದ್ಯಮಗಳಿಗೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಡೀಪ್ ಫೇಕ್ ಕುರಿತು ಮಾತನಾಡಿದ ಪ್ರಧಾನಿ ಮೋದಿ “ಇತ್ತೀಚೆಗೆ ನಾನು ಹಾಡು ಹಾಡುತ್ತಿರುವ ವೀಡಿಯೋ ನೋಡಿದೆ. ನನ್ನು ಇಷ್ಟಪಡುವ ಜನರು ಅದನ್ನು ಪಾರ್ವರ್ಡ ಮಾಡಿದ್ದಾರೆ. ಅಲ್ಲದೇ ಈ ಡೀಪ್ ಸಮಸ್ಯೆ ದೊಡ್ಡದಾಗಿದ್ದು, ಚಾಟ್ ಜಿಪಿಟಿಯು ಇದರ ಬಗ್ಗೆ ಬಳೆಕೆದಾರರಿಗೆ ಎಚ್ಚರಿಕೆ ನೀಡಬೇಕು ಎಂದು ಪ್ರಧಾನಿ ಸಲಹೆ ನೀಡಿದರು.
ಈ ತಂತ್ರಜ್ಞಾನವು ಸೌಥ್ ಮತ್ತು ನಾರ್ಥ್ ಗ್ಲೋಬಲ್ ನಡುವಿನ ಅಂತರವನ್ನು ಹೆಚ್ಚಿಸಬಾರದೆಂದು ಭಾರತ ಭಾವಿಸುತ್ತದೆ. ಎಐ ನ್ನು ಹಾಗೂ ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸಬೇಕು. ಈ ಬಗ್ಗೆ ಮಾತನಾಡಲು ಎಲ್ಲಾ ರಾಷ್ಟ್ರಗಳಿಗೂ ಇದು ಸೂಕ್ತ ಸಮಯ. ಇವುಗಳನ್ನು ಉತ್ತೇಜಿಸಲು ಮುಂದಿನ ತಿಂಗಳು ಭಾರತವು ಆರ್ಟಿಫಿಷಿಯಲ್ ಗ್ಲೇಬಲ್ ಪಾರ್ಟ್ನರ್‌ಶಿಪ್ ಸಮ್ಮಿಟ್‌ಗೆ ಆತಿಥ್ಯ ವಹಿಸಲಿದೆ ಎದು ಪ್ರಧಾನಿ ಮೋದಿ ತಿಳಿಸಿದರು.
ಜಿ20 ಸಭೆಗಳಲ್ಲಿ ಗ್ಲೋಬಲ್ ಸೌಥ್ ಆದ್ಯತೆ : ದೆಹಲಿ ಜಿ-20 ಡಿಕ್ಲರೇಶನ್‌ನಲ್ಲಿ ಗ್ಲೋಬಲ್ ಸೌತ್ ವಿಷಯವನ್ನು ಸೇರಿಸಲಾಗಿದೆ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ನೆನಪಿಸಿದ್ದಾರೆ. ಕಳೆದ ವರ್ಷ ನಡೆದ ಜಿ20 ಸಭೆಗಳಲ್ಲಿ ಗ್ಲೋಬಲ್ ಸೌಥ್ ಆದ್ಯತೆಯನ್ನು ಭಾರತ ವಿವರಿಸಿದೆ ಎಂದು ಮೋದಿ ಹೇಳಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಾಗ, ಗ್ಲೋಬಲ್ ಸೌತ್ ಧ್ವನಿಯನ್ನು ಎತ್ತುವ ಜವಾಬ್ದಾರಿಯನ್ನು ನಾವು ತೆಗೆದುಕೊಂಡಿದ್ದೇವೆ. ಜಿ20 ಅನ್ನು ಅಂತರ್ಗತ, ಮಾನವೀಯ ಕೇಂದ್ರವನ್ನಾಗಿ ಮಾಡುವುದು ನಮ್ಮ ಆದ್ಯತೆಯಾಗಿ ತೆಗೆದುಕೊಂಡಿದ್ದೇವು. ಅದರ ಭಾಗವಾಗಿ ನಾವು ಈ ವರ್ಷದ ಜನವರಿಯಲ್ಲಿ ಮೊದಲ ಬಾರಿಗೆ ವಾಯ್ಸ್ ಆಫ್ ಗ್ಲೋಬಲ್ ಸೌತ್ ಸಮ್ಮಿಟ್ ಆಯೋಜಿಸಿದ್ದೇವೆ ಎಂದು ಪ್ರಧಾನಿ ಮೋದಿ ವಿವರಿಸಿದರು.



