ಬೆಂಗಳೂರು : ತೆಲಂಗಾಣ ನಂತರ ದಕ್ಷಿಣದ ರಾಜ್ಯಗಳಲ್ಲಿ ಅಂಗಾಂಗ ದಾನದಲ್ಲಿ ಎರಡನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ ಎಂಬುದು ಹೆಮ್ಮೆಯ ವಿಷಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಸುಧಾಕರ್ ಹೇಳಿದ್ದಾರೆ.
2022 ಡಿಸೆಂಬರ್ 14 ವರೆಗಿನ ದಾಖಲೆ ಸಂಖ್ಯೆಯ ಆಧಾರದ ಮೇಲೆ 143 ಅಂಗಾಂಗ ದಾನ(Organ Donations)ಗಳೊಂದಿಗೆ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಅಂಗಾಂದ ದಾನದಂತಹ ಮಹತ್ವದ ಕಾರ್ಯದಿಂದಾಗಿ ಕರ್ನಾಟಕದಾದ್ಯಂತ ಸುಮಾರು 397 ಜನರಿಗೆ ಅಂಗಾಂಗಗವನ್ನು ನೀಡಿ ಅವರಿಗೆ ಹೊಸ ಜೀವನವನ್ನು ನಡೆಸುತ್ತಿರುವುದು ನಿಜಕ್ಕೂ ರಾಜ್ಯಕ್ಕೆ ಹೆಮ್ಮೆಯ ವಿಷಯ. ತೆಲಂಗಾಣ ನಂತರ ದಕ್ಷಿಣದ ರಾಜ್ಯಗಳಲ್ಲಿ ಅಂಗಾಂಗ ದಾನದಲ್ಲಿ ಎರಡನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ ಸುಧಾಕರ್ ಹೇಳಿದ್ದಾರೆ.
ಹಿಂದಿನ ವರ್ಷ ಕರ್ನಾಟಕದಲ್ಲಿ 70 ಅಂಗಾಂಗ ದಾನಗಳು ದಾಖಲಿಸಿಲಾಗಿತ್ತು. ನಂತರದ ದಿನಗಳಲ್ಲಿ ಅಂಗಾಂಗ ದಾನಗಳ ಕುರಿತು ಮೂಡಿಸಿದ ಜಾಗೃತಿಯಿಂದಾಗಿ ದೊಡ್ಡ ಪ್ರಮಾಣದ ಅಂಗಾಂಗ ದಾನಗಳಿಗೆ ಕಾರಣವಾಗಿದೆ ಎಂದು ಕರ್ನಾಟಕದ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ ಕಾರ್ಯದರ್ಶಿ ಡಾ ಕಿರಣ್ ಕುಮಾರ್ ಡೆಕ್ಕನ್ ಹೆರಾಲ್ಡ್ ಜೊತೆಗೆ ಹಂಚಿಕೊಂಡಿದ್ದಾರೆ. ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ 2021ಕ್ಕೆ ಹೋಲಿಸಿದ್ದರೆ, 2022 ರಲ್ಲಿ ನಾಲ್ಕರಿಂದ ಅಂಗಾಂಗ ದಾನಗಳ ಸಂಖ್ಯೆ 15 ಕ್ಕೆ ಏರಿಕೆ ಕಂಡಿದೆ. ಇದರಲ್ಲಿ 95 ಪ್ರತಿಶತದಷ್ಟು ಮೆದುಳು ನಿಷ್ಕ್ರಿಯಗೊಂಡ ರೋಗಿಗಳ ಕುಟುಂಬದ ಸದಸ್ಯರು ಅಂಗಾಂಗ ದಾನದಂತಹ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ 72 ಜನರ ಜೀವಗಳನ್ನು ಉಳಿಸಲಾಯಿತು. ಕೆಲವು ವಾರಗಳ ಹಿಂದೆಯಷ್ಟೇ ಮಂಜೇಶ್ವರ ಕೇರಳದಲ್ಲಿ ಅಪಘಾತಕ್ಕೀಡಾದ ಘಟನೆಯ ಕುರಿತು ಡಾ ಕಿರಣ್ ಕುಮಾರ್ ನೆನಪಿಸಿಕೊಂಡಿದ್ದಾರೆ.
ಕೋಡಿಕಲ್‌ನ ನಿವಾಸಿಯೊಬ್ಬರು , ಐದು ವರ್ಷಗಳಿಂದ ಡಯಾಲಿಸಿಸ್‌ಗೆ ಒಳಗಾಗಿದ್ದರು. ಕಸಿ ಮಾಡಿದ ನಂತರ ಸಾಮಾನ್ಯ ಜೀವನವನ್ನು ನಡೆಸುತ್ತಿರುವುದರಿಂದ ಮೂತ್ರಪಿಂಡವನ್ನು ದಾನ ಮಾಡಿದ ದಾನಿಯ ಕುಟುಂಬವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.