ಬೆಳಗಾವಿ : ಆಯುಷ್ ಇಲಾಖೆಯಲ್ಲಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳನ್ನು ಕೃಪಾಂಕ ನೀಡುವ ಮೂಲಕ ಖಾಯಂ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಹೇಳಿದ್ದಾರೆ.
ಶಾಸಕ ಎ.ಟಿ.ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆಯುಷ್ ಇಲಾಖೆಗೆ ಒಳಪಡುವ ವೈದ್ಯರಿಗೆ ವರ್ಷಕ್ಕೆ ಎರಡು ಕೃಪಾಂಕಗಳನ್ನು ನೀಡಲಾಗುತ್ತದೆ. ಈ ರೀತಿ 10 ವರ್ಷ ಯಾರೂ ಪೂರ್ಣಗೊಳಿಸುತ್ತಾರೋ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಖಾಯಂ ನೇಮಕಾತಿ ಮಾಡಿಕೊಳ್ಳುವುದಾಗಿ ಹೇಳಿದರು.
ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಕಾರಿಗಳನ್ನು ಖಾಯಂಗೊಳಿಸಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. 10 ವರ್ಷ ಗುತ್ತಿಗೆ ಆಧಾರದ ಮೇಲೆ ಪೂರ್ಣಗೊಳಿಸಿದವರನ್ನು ಮಾತ್ರ ಖಾಯಂಗೊಳಿಸಲಾಗುವುದು ಎಂದರು.
10 ವರ್ಷ ಮೇಲ್ಪಟ್ಟ ಸೇವೆ ಸಲ್ಲಿಸಿರುವ ಆಯುಷ್ ವೈದ್ಯಾಕಾರಿಗಳನ್ನು ಖಾಲಿ ಇರುವ 163 ಹುದ್ದೆಗಳಿಗೆ ಕಳೆದ ಜನವರಿಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. 2011-12ರಿಂದ ಕೇಂದ್ರ ಪುರಸ್ಕøತ ನ್ಯಾಮ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಪರಿಣಾಮ ಮೇಲ್ದರ್ಜೆಗೇರಿಸಲಾದ ಆಯುಷ್ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ 2011-12ರಲ್ಲಿ 109 ಹಾಗೂ 2018-19ರಲ್ಲಿ 22 ವೈದಾಕಾರಿಗಳನ್ನು ನೇಮಕ ಮಾಡಿಕೊಳ್ಳಲಾಯಿತು ಎಂದು ಅಂಕಿ ಅಂಶ ನೀಡಿದರು.
ಆರ್ಯುವೇದ 148, ಯುನಾಯಿ 33, ಹೋಮಿಯೋಪಥಿ 22, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸೇರಿದಂತೆ 209 ಹುದ್ದೆಗಳು ಖಾಲಿ ಇವೆ. ಕೆಪಿಎಸ್ಸಿ ಮೂಲಕ ಕಳೆದ ಆಗಸ್ಟ್ನಲ್ಲಿ 110 ಆಯುಷ್ ಅಕಾರಿಗಳು ಆಯ್ಕೆಗೊಂಡಿದ್ದು, ಇದರಲ್ಲಿ 102 ವೈದ್ಯಾಕಾರಿಗಳನ್ನು ನೇಮಕ ಮಾಡಿ ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.