Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

‘ಎಕ್ಕ’ ಚಿತ್ರದಲ್ಲಿ ನನ್ನನ್ನು ಹೊಸ ರೀತಿಯಲ್ಲಿ ನೋಡಬಹುದು: ಯುವ ರಾಜಕುಮಾರ್

ekka-movie-program-

ಯುವ ರಾಜಕುಮಾರ್ ಅಭಿನಯದ ‘ಯುವ’ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಅವರ ಎರಡನೇ ಚಿತ್ರ ಇದೇ ಜುಲೈ 18ಕ್ಕೆ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರ ಟೀಸರ್ ‍ಮತ್ತು ಹಾಡುಗಳು ಬಿಡುಗಡೆ ಆಗಿವೆ. ಕಳೆದ ವಾರ ‘ಬ್ಯಾಂಗಲ್‍ ಬಂಗಾರಿ’ ಎಂಬ ಹಾಡು ಬಿಡಗುಡೆ ಆಗಿದ್ದು, ಸಾಕಷ್ಟು ಜನಪ್ರಿಯವಾಗಿವೆ. ಚಿತ್ರದ ಹಾಡುಗಳು ಗೆದ್ದ ಖುಷಿಯಲ್ಲಿ ಚಿತ್ರತಂಡ ಇದೀಗ ಪ್ರಚಾರ ಶುರು ಮಾಡಿದೆ.

ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ‘ನಾವು ಬಿಟ್ಟಿರುವ ಹಾಡು ಮತ್ತು ಟೀಸರ್‍ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಸಹ ಅಷ್ಟೇ ಖುಷಿಯಿಂದ ಚಿತ್ರ ಮಾಡಿದ್ದೇವೆ. ಚಿತ್ರ ನೋಡುವಾಗ ಪ್ರೇಕ್ಷಕರಿಗೂ ಖುಷಿಯಾಗುತ್ತದೆ. ಈ ಪ್ರಯಾಣದಲ್ಲಿ ಸಾಕಷ್ಟು ಕಲಿತಿದ್ದೇನೆ’ ಎಂದರು.

ಇದನ್ನೂ ಓದಿ: ‘ಎಡಗೈ’ ಜೊತಯಾದ ‘ಬ್ಲಿಂಕ್’ ಮತ್ತು ‘ಶಾಖಹಾರಿ’ ನಿರ್ಮಾಪಕರು

’ಬ್ಯಾಂಗಲ್ ಬಂಗಾರಿ’ ಹಾಡಿಗೆ ಎಲ್ಲಾ ವರ್ಗದ ಜನ ಇಷ್ಟಪಟ್ಟು ಡ್ಯಾನ್ಸ್ ಮಾಡಿರುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಯುವ, ‘ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಎಲ್ಲರೂ ಎಂಜಾಯ್ ಮಾಡುತ್ತಾರೆ ಎಂಬ ನಂಬಿಕೆ ಇದೆ. ಈ ಚಿತ್ರದಲ್ಲಿ ನನ್ನನ್ನು ಹೊಸ ರೀತಿಯಲ್ಲಿ ನೋಡಬಹುದು’ ಎಂದು ಹೇಳಿದರು.

ಮೊದಲು ಜೂನ್ 6ಕ್ಕೆ ಸಿನಿಮಾ ಬಿಡುಗಡೆ ಮಾಡಬೇಕೆಂದು ಪ್ರಯತ್ನಿಸಿದ್ದೆವು ಎಂದ ನಿರ್ಮಾಪಕ ಕಾರ್ತಿಕ್ ಗೌಡ, ‘ಸಿನಿಮಾ ಕೆಲಸ ಬಾಕಿ ಇದ್ದುದರಿಂದ ಜುಲೈ 18ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಸಿನಿಮಾ ಚೆನ್ನಾಗಿದ್ದರೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಜುಲೈ ತಿಂಗಳಿನಿಮದ ಕೆಲವು ದೊಡ್ಡ ಚಿತ್ರಗಳು ಬಿಡುಗಡೆಗೆ ತಯಾರಿ ನಡೆಸಿದ್ದು, ಈ ಪೈಕಿ ‘ಕೆಡಿ’, ‘ಡೆವಿಲ್’, ‘45’ ಮುಂತಾದ ದೊಡ್ಡ ಚಿತ್ರಗಳು ಬಿಡುಗಡೆ ಆಗಲಿವೆ’ ಎಂದರು.

‘ಎಕ್ಕ’ ಚಿತ್ರವನ್ನು ಪಿ.ಆರ್‌.ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆ.ಆರ್‌.ಜಿ ಸ್ಟುಡಿಯೋಸ್ ಸಂಸ್ಥೆಗಳು ಜೊತೆಯಾಗಿ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ಯುವ ರಾಜಕುಮಾರ್ ಜೊತೆಗೆ ಸಂಪದ ಹುಲಿವಾನ, ಸಂಜನಾ ಆನಂದ್, ಶ್ರುತಿ, ಅತುಲ್ ಕುಲಕರ್ಣಿ, ಆದಿತ್ಯ, ಸಾಧು ಕೋಕಿಲ, ಪುನೀತ್ ರುದ್ರನಾಗ್, ಡಾ. ಸೂರಿ, ಹರಿಣಿ ಮುಂತಾದವರು ನಟಿಸಿದ್ದಾರೆ. ಚರಣ್‍ ರಾಜ್‍ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ.

Tags:
error: Content is protected !!