Mysore
21
clear sky

Social Media

ಬುಧವಾರ, 21 ಜನವರಿ 2026
Light
Dark

ಪೃಥ್ವಿ ಹೊಸ ಚಿತ್ರ ‘ಕೊತ್ತಲವಾಡಿ’; ಯಶ್‍ ತಾಯಿ ನಿರ್ಮಾಪಕಿ

prathvi ambhar yash

ನಟ ಯಶ್‍ ನಿರ್ಮಾಪಕರಾಗಿರುವ ವಿಷಯ ಗೊತ್ತೇ ಇದೆ. ಈಗ ಅವರ ತಾಯಿ ಪುಷ್ಪಾ ಸಹ ನಿರ್ಮಾಪಕಿಯಾಗಿದ್ದಾರೆ. ಅವರು ಪಿ.ಎ ಪ್ರೊಡಕ್ಷನ್ಸ್ (ಪುಷ್ಪಾ – ಅರುಣ್‍ ಕುಮಾರ್) ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಈ ಚಿತ್ರದಡಿ ಮೊದಲ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ.

ಈ ಚಿತ್ರದ ಘೋಷಣೆ ಬುಧವಾರ, ಅಕ್ಷಯ ತೃತೀಯದ ಅಂಗವಾಗಿ ಅಧಿಕೃತವಾಗಿ ಆಗಿದೆ. ಈ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರಕ್ಕೆ ‘ಕೊತ್ತಲವಾಡಿ’ ಎಂದು ಹೆಸರು ಇಡಲಾಗಿದೆ. ಈ ಚಿತ್ರವನ್ನು ಶ್ರೀರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕೆ.ವಿ. ರಾಜು, ರವಿ ಶ್ರೀವತ್ಸ ಮುಂತಾದವರ ಗರಡಿಯಲ್ಲಿ ಕೆಲಸ ಮಾಡಿರುವ ಶ್ರೀರಾಜ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:- ಸೆಟ್ಟೇರಿತು ಸೂರಿ ಹೊಸ ಸಿನಿಮಾ; ಯುವಗೆ ‘ದುನಿಯಾ’ ವಿಜಯ್‌ ಪುತ್ರಿ ನಾಯಕಿ 

‘ಕೊತ್ತಲವಾಡಿ’ ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯಾಗಿದ್ದ, ಪೃಥ್ವಿ ಅಂಬಾರ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ. ಅವರಿಗೆ ನಾಯಕಿಯಾಗಿ ಕಿರುತೆರೆ ನಟಿ ಕಾವ್ಯಾ ಶೈವ ನಟಿಸುತ್ತಿದ್ದು, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಮುಂತಾದ ಜನಪ್ರಿಯ ನಟರು ನಟಿಸುತ್ತಿದ್ದಾರೆ.

PA ಪ್ರೊಡಕ್ಷನ್ಸ್ ಸಂಸ್ಥೆಯಿಂದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ಪುಷ್ಪ ಅರುಣ್ ಕುಮಾರ್ ಈ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿದ್ದು, ಶ್ರೀರಾಜ್‍ ಜೊತೆಗೆ ಹಿನ್ನೆಲೆ ಸಂಗೀತ ಸಂಯೋಜಿಸಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಸಹ ಹೊಸಬರೇ.

‘ಕೊತ್ತಲವಾಡಿ’ ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಇದೆ.

ಇದನ್ನೂ ಓದಿ: ಪೃಥ್ವಿ ಹೊಸ ಚಿತ್ರ ‘ಕೊತ್ತಲವಾಡಿ’; ಯಶ್‍ ತಾಯಿ ನಿರ್ಮಾಪಕಿ

Tags:
error: Content is protected !!