Mysore
18
mist

Social Media

ಶುಕ್ರವಾರ, 23 ಜನವರಿ 2026
Light
Dark

‘ಹರ್ಕ್ಯುಲಸ್’ ಆದ ವಿರಾಟ್‍; ಮಾಸ್‍ ಹೀರೋ ಆಗಿ ಬದಲಾಗಲು ಪ್ರಯತ್ನ

ಈ ಹಿಂದೆ ‘ಕಿಸ್‍’ ಚಿತ್ರದ ಮೂಲಕ ಹೀರೋ ಆದ ವಿರಾಟ್‍, ನಂತರ ‘ರಾಯಲ್‍’ ಎಂಬ ಚಿತ್ರದಲ್ಲಿ ನಟಿಸಿದ್ದರು. ಅವರ ಮೂರನೆಯ ಚಿತ್ರ ಯಾವುದಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ವಿರಾಟ್‍ ಅಭಿನಯದ ಮೂರನೇ ಚಿತ್ರಕ್ಕೆ ‘ಹರ್ಕ್ಯುಲಸ್’ ಎಂಬ ಹೆಸರನ್ನು ಇಡಲಾಗಿದೆ.

ಈ ‘ಹರ್ಕ್ಯುಲಸ್’ ಚಿತ್ರಕ್ಕೆ ಭಗೀರಥ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. Aahana ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ, Chat GPT ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕಗೆ ಈ ಚಿತ್ರ ಪಾತ್ರವಾಗಿದೆ. ಈ ಚಿತ್ರದ ಮೊದಲ ನೋಟ ಶನಿವಾರ ಬಿಡುಗಡೆಯಾಗಿದೆ. ವಿರಾಟ್‍ನ ಸುಮಾರು 200 ಅಡಿಯ ಬೃಹತ್ ಟೈಟಲ್ ಪೋಸ್ಟರನ್ನು ಬೆಂಗಳೂರಿನ ಕೋಣನಕುಂಟೆ ಬಳಿ ಇರುವ Superflex Forum Mall ಆವರಣದಲ್ಲಿ ಬಿಡುಗಡೆ ಮಾಡಲಾಗಿದೆ.

ಇದನ್ನು ಓದಿ: ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದ ಪುನೀತ್‍; ಅಪ್ಪು‌ Fandom ಆ್ಯಪ್ ಅನಾವರಣ

‘ಹರ್ಕ್ಯುಲಸ್’ ಕುರಿತು ಮಾತನಾಡುವ ನಿರ್ದೇಶಕ ಭಗೀರಥ , ‘ಇದು ಒಬ್ಬ ಯೋಧನ ಹೆಸರು. ಇದು ಸೋಲನ್ನೇ ಕಾಣದ ಒಬ್ಬ ಯೋಧನ ಹೆಸರು. ನಮ್ಮ ಚಿತ್ರದಲ್ಲಿ ನಾಯಕನ ಪಾತ್ರ ಅದೇ ರೀತಿ ಇರುತ್ತದೆ. ಇದೊಂದು ಆಕ್ಷನ್ ಪ್ರೇಮಕಥೆ ಇರುವ ಸಿನಿಮಾ. ಈ ಚಿತ್ರದ ಮೂಲಕ ವಿರಾಟ್ ಅವರನ್ನ ಬೇರೆಯದೇ ರೀತಿಯಲ್ಲಿ ತೋರಿಸಬೇಕೆಂದು ಪ್ರಯತ್ನಿಸುತ್ತಿದ್ದೇವೆ. ನವೆಂಬರ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭಿಸಿ, ಮುಂದಿನ ವರ್ಷ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದರು.

ವಿರಾಟ್‍ ಮಾತನಾಡಿ, ‘ಹರ್ಕ್ಯುಲಸ್ ಇನ್ನೊಬ್ಬರಿಗೋಸ್ಕರ ಯುದ್ದ ಮಾಡುತ್ತಾನೆ. ಆತನಿಗೆ ಯಾವತ್ತೂ ಸೋಲಿಲ್ಲ. ಇಲ್ಲಿ ಆತನ ಹೋರಾಟ ಯಾರಿಗೋಸ್ಕರ ಅನ್ನೋದೇ ಚಿತ್ರದ ಕಥೆ. ಈ ಚಿತ್ರದಲ್ಲಿ ನನಗೆ ಮೂರು ಶೇಡ್ಗಳು ಇದೆ. ನನ್ನ ಹಿಂದಿನ ಚಿತ್ರಗಳಲ್ಲಿ ಲವ್ವರ್ ಬಾಯ್‍ ಪಾತ್ರದಲ್ಲಿ ಕಾಣಿಸಿಕೊಮಡಿದ್ದೆ. ಈ ಚಿತ್ರದಲ್ಲಿ ಆಕ್ಷನ್ ಕಮ್ ಲವ್ವರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರಕ್ಕಾಗಿ ಗೆಟಪ್ ಸೇರಿದಂತೆ ಬಹಳಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ’ ಎಂದರು.

ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಮಗ ಆದಿ ಹರಿ, ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಇದಕ್ಕೂ ಮೊದಲು ಅವರು ‘ಕಿಸ್‍’ ಚಿತ್ರದ ಹಾಡೊಂದನ್ನು ಅವರು ಸಂಯೋಜಿಸಿದ್ದರು. ಈ ಚಿತ್ರದ ಮೂಲಕ ಅವರು ಸ್ವತಂತ್ರ ಸಂಗೀತ ನಿರ್ದೇಶಕರಾಗುತ್ತಿದ್ದಾರೆ.

Tags:
error: Content is protected !!