Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ತೆಲುಗಿನ ‘ಮೀಕು ಮಾತ್ರಮೆ ಚಪ್ತಾ’ ಕನ್ನಡಕ್ಕೆ ಬಂತು …

ತೆಲುಗಿನಲ್ಲಿ ಕೆಲವು ವರ್ಷಗಳ ಹಿಂದೆ ‘ಮೀಕು ಮಾತ್ರಮೆ ಚಪ್ತಾ’ ಎಂಬ ಕಾಮಿಡಿ ಚಿತ್ರ ಬಂದು ಯಶಸ್ವಿಯಾಗಿತ್ತು. ಈಗ ಆ ಚಿತ್ರವು ಕನ್ನಡದಲ್ಲಿ ಸದ್ದಿಲ್ಲದೆ ರೀಮೇಕ್‍ ಆಗಿ, ಬಿಡುಗಡೆಗೂ ನಿಂತಿದೆ. ಇದೇ ಅಕ್ಟೋಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹೆಸರು ‘ಯಾರಿಗೂ ಹೇಳ್ಬೇಡಿ’.

ಹೆಸರು ಕೇಳುತ್ತಿದ್ದಂತೆಯೇ, ಮೂರು ದಶಕಗಳ ಹಿಂದೆ ಬಿಡುಗಡೆಯಾದ ಅನಂತ್‍ ನಾಗ್ ಅಭಿನಯದ ‘ಯಾರಿಗೂ ಹೇಳ್ಬೇಡಿ’ ನೆನಪಾಗಬಹುದು. ಆ ಚಿತ್ರಕ್ಕೂ, ಈ ಚಿತ್ರಕ್ಕೂ ಸಂಬಂಧವಿಲ್ಲವಂತೆ. ಚಿತ್ರದಲ್ಲಿ ಚೇತನ್‍ ವಿಕ್ಕಿ ನಾಯಕನಾಗಿ ನಟಿಸಿದರೆ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಅಪ್ಪಣ್ಣ ಸ್ನೇಹಿತನಾಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚೈತ್ರಾ ಆಚಾರ್ ಈ ಚಿತ್ರದಲ್ಲಿ ವೈದ್ಯೆಯಾಗಿ ಕಾಣಿಸಿಕೊಂಡರೆ, ಮಿಕ್ಕಂತೆ ಅಶ್ವಿನಿ ಪೊಲೆಪಲ್ಲಿ, ಶರತ್ ಲೋಹಿತಾಶ್ವ, ಚೈತ್ರಾರಾವ್, ಶಭರೇಶ್, ಕಾರ್ತಿಕ್ ಮುಂತಾದವರು ನಟಿಸಿದ್ದಾರೆ. ಹೈದರಬಾದ್‌ನ ಹರೀಶ್ ಅಮ್ಮಿನೇನಿ ಈ ಚಿತ್ರ ನಿರ್ಮಿಸಿದರೆ, ಶಿವಗಣೇಶ್‍ ನಿರ್ದೇಶನ ಮಾಡಿದ್ದಾರೆ.

ಇದನ್ನು ಓದಿ: ಮೊದಲು ಕನ್ನಡ, ನಂತರ ಬೇರೆ ಭಾಷೆಗಳಲ್ಲಿ ಬರಲಿದ್ದಾನೆ ‘ಬ್ರ್ಯಾಟ್‍’

ಈ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಾಯಕ ಚೇತನ್ ವಿಕ್ಕಿ, ‘ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ. ಶುರುವಿನಿಂದ ಕೊನೆವರೆಗೂ ನಗಿಸುತ್ತಲೇ ಸಾಗುತ್ತದೆ. ನಾನಿಲ್ಲಿ ವಿಡಿಯೋ ಜಾಕಿಯಾಗಿ ಕಾಣಿಸಿಕೊಂಡಿದ್ದು, ಮದುವೆ ಮುಂಚಿನ ಒಂದು ಸಂದರ್ಭದಲ್ಲಿ ಸುಳ್ಳು ಹೇಳಿ ಕಷ್ಟಕ್ಕೆ ಸಿಲುಕುತ್ತೇನೆ. ಅದನ್ನು ಯಾರಿಗೂ ಹೇಳ್ಬೇಡಿ ಎಂದು ಸುಳ್ಳಿನ ಸರಮಾಲೆಯನ್ನೆ ಕಟ್ಟುತ್ತೇನೆ. ಕೊನೆಗೆ ಅದನ್ನು ಮುಚ್ಚಿಡಲು ಹೋದಾಗ ಏನೆಲ್ಲಾ ಅವಾಂತರಗಳು ಆಗುತ್ತದೆ, ಅದರಿಂದ ಹೇಗೆ ಹೊರಗೆ ಬರುತ್ತೇನೆ ಎಂಬುದು ಕಾಮಿಡಿ ಮೂಲಕ ಹೇಳಲಾಗಿದೆ’ ಎಂದರು.

ಅಶ್ವಿನಿ ಪೋಲೇಪಲ್ಲಿ ಮಾತನಾಡಿ, ‘ಬಿಗ್‍ ಬಜೆಟ್‍ ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕ ಚಿತ್ರಗಳಲ್ಲಿ ಕಂಟೆಂಟ್‍ ಇರುವುದಿಲ್ಲ ಎಂಬ ನಂಬಿಕೆ ಹೆಚ್ಚಾಗುತ್ತಿದೆ. ನಮ್ಮ ಸಿನಿಮಾ ನೋಡಿದರೆ ಅದು ಕಡಿಮೆಯಾಗುತ್ತದೆ. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದರು.

‘ಯಾರಿಗೂ ಹೇಳ್ಬೇಡಿ’ ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ, ಡೇವಿಡ್‍ ಆನಂದರಾಜ್‍ ಛಾಯಾಗ್ರಹಣವಿದೆ.

Tags:
error: Content is protected !!