Mysore
17
few clouds

Social Media

ಬುಧವಾರ, 21 ಜನವರಿ 2026
Light
Dark

‘ನಿದ್ರಾದೇವಿ ಬಾ…’ ಎಂದು ಹಾಡಿ ಮಗನನ್ನು ಮಲಗಿಸಿದ ಸುಧಾರಾಣಿ …

nidra devi

ಕನ್ನಡದಲ್ಲಿ ತಾಯಿ-ಮಗನ ಬಾಂಧವ್ಯ ಸಾರುವ ಹಲವು ಹಾಡುಗಳು ಬಂದಿವೆ. ಈ ಸಾಲಿಗೆ ಇದೀಗ ‘ನಿದ್ರಾದೇವಿ Next Door’ ಚಿತ್ರದ ‘ನಿದ್ರಾದೇವಿ ಬಾ …’ ಎಂಬ ಹಾಡು ಸಹ ಸೇರಿಕೊಂಡಿದೆ.

ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಸುರಾಗ್ ನಿರ್ದೇಶನದ ‘ನಿದ್ರಾದೇವಿ next door’ ಚಿತ್ರವು ಸೆಪ್ಟೆಂಬರ್‍ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರವೀರ್ ಹಾಗೂ ರಿಷಿಕಾ ನಾಯಕ – ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕಾಗಿ ಪವನ್ ಭಟ್ ಬರೆದಿರುವ ‘ನಿದ್ರಾದೇವಿ ಬಾ …’ ಎಂಬ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಯಿತು. ನಕುಲ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ಶ್ರೀಲಕ್ಷ್ಮೀ ಬೆಳ್ಮಣ್ಣು ಹಾಡಿದ್ದಾರೆ. ತಾಯಿ – ಮಗನ ಬಾಂಧವ್ಯದ ಈ ಹಾಡಿನಲ್ಲಿ ಹಿರಿಯ ನಟಿ ಸುಧಾರಾಣಿ ಹಾಗೂ ಮಾಸ್ಟರ್ ಸುಜಯ್ ಅಭಿನಯಿಸಿದ್ದಾರೆ.

‘ನಿದ್ರಾದೇವಿ Next Door’ ಚಿತ್ರಕ್ಕೆ ವಿಷ್ಣುವರ್ಧನ್‍ ಅಭಿನಯದ ಜನಪ್ರಿಯ ‘ಜೋ ಜೋ ಲಾಲಿ …’ ಬರುವ ‘ನಿದ್ರಾದೇವಿ ಬಾ …’ ಎಂಬ ಪದಗಳು ಸ್ಫೂರ್ತಿಯಂತೆ. ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸುರಾಗ್, ‘ಸಾಮಾನ್ಯವಾಗಿ ತಂದೆಗೆ ಮಗಳ ಮೇಲೆ, ತಾಯಿಗೆ ಮಗನ ಮೇಲೆ ಪ್ರೀತಿ ಜಾಸ್ತಿ ‌ಎಂಬುವುದು ವಾಡಿಕೆ. ನಮ್ಮ ಚಿತ್ರದಲ್ಲಿ ತಾಯಿ – ಮಗನ ಬಾಂಧವ್ಯ ಸಾರುವ ಹಾಡಿದೆ. ಈ ಹಾಡಿಗೆ ವಿಷ್ಣುವರ್ಧನ್‍ ಅವರ ಚಿತ್ರದ ಹಾಡುಗಳು ಸ್ಫೂರ್ತಿ’ ಎಂದರು.

ಸುಧಾರಾಣಿ ಮಾತನಾಡಿ, ‘ನಿರ್ದೇಶಕ ಸುರಾಗ್ ಅವರು ಈ ಚಿತ್ರದ ಕಥೆ ಹೇಳಿದಾಗ ಪಾತ್ರ ಇಷ್ಟವಾಯಿತು. ಕೆಲವರು ಕಥೆ ಹೇಳಬೇಕಾದರೆ ಆ ಪಾತ್ರ ಒಂದು ರೀತಿ ಇರುತ್ತದೆ, ತೆರೆಯ ಮೇಲೆ ಬಂದಾಗ ಬೇರೆ ರೀತಿಯೇ ಇರುತ್ತದೆ. ಆದರೆ, ಸುರಾಗ್ ಅವರು ಕಥೆ ಹೇಳಿದ ಹಾಗೆಯೇ ಪಾತ್ರವನ್ನು ತೆರೆಯ ಮೇಲೆ ತಂದಿದ್ದಾರೆ. ತಾಯಿ – ಮಗನ ಬಾಂಧವ್ಯದ ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ’ ಎಂದು ಹಾರೈಸಿದರು.

‘ನಿದ್ರಾದೇವಿ next door’ ಚಿತ್ರದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ, ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Tags:
error: Content is protected !!