ಚಲನಚಿತ್ರೋದ್ಯಮದ ಮೇಲೆ ಪೈರಸಿಯ ದುಷ್ಪರಿಣಾಮದ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಬಹಳ ಜಾಗೃತವಾಗಿದೆ. ಕಾನೂನು ಜಾರಿ ಹಾಗೂ ಜಾಗೃತಿ ಕ್ರಮಗಳನ್ನು ಒಳಗೊಂಡ ಬಹುಮುಖಿ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ತಿಳಿಸಿದ್ದಾರೆ.
ನಟ ಹಾಗೂ ರಾಜ್ಯಸಭೆ ಸದಸ್ಯ ಜಗ್ಗೇಶ್ ಅವರು ಡಿಸೆಂಬರ್.11ರಂದು ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಚಲನಚಿತ್ರಗಳ ಪೈರಸಿಯ ಕುರಿತು ನೀವು ಎತ್ತಿರ ಪೈರಸಿ ಕಳವಳದ ಬಗ್ಗೆ ಕೈಗೊಂಡಿರುವ ಕ್ರಮಗಳು ಕುರಿತಾಗಿ ಅವರು ತಿಳಿಸಿದ್ದಾರೆ.
ಪೈರಸಿ ವಿಷಯಗಳನ್ನು ಹೋಸ್ಟ್ ಮಾಡುವ ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರ ನೀಡುವ ಮೂಲಕ ಚಲನಚಿತ್ರಗಳ ಪೈರಸಿಯನ್ನು ನಿಗ್ರಹಿಸಲು ಕಾನೂನು ಚೌಕಟ್ಟನ್ನು ಬಲಪಡಿಸಲಾಗಿದೆ.
ಜೊತೆಗೆ ಪೈರಸಿ ವಿರೋಧಿ ತಂತ್ರಗಳನ್ನು ಬಲಪಡಿಸಲು ಹಾಗೂ ಸಂಘಟಿತ ಕ್ರಿಯಾ ಯೋಜನೆಗಳನ್ನು ರೂಪಿಸಲು ಗೃಹ ವ್ಯವಹಾರಗಳ ಸಚಿವಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಯೋಜನೆ ರೂಪಿಸಿದೆ.





