ಕೆಲವು ದಿನಗಳ ಹಿಂದಷ್ಟೇ ‘ಸೀಟ್ ಎಡ್ಜ್’ ಎಂಬ ಚಿತ್ರದಲ್ಲಿ ಸಿದ್ದು ಮೂಲಿಮನಿ ನಾಯಕನಾಗಿ ನಟಿಸುತ್ತಿರುವ ಸುದ್ದಿ ಬಂದಿತ್ತು. ‘ವಿಕ್ರಾಂತ್ ರೋಣ’, ‘ರಂಗಿ ತರಂಗ’, ‘ಅಜ್ಞಾತವಾಸಿ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಸಿದ್ದು ಮೂಲಿಮನಿ, ಹಾರರ್ ಕಾಮಿಡಿಯಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದರಲ್ಲಿ ಹೆದರಿಸುವ ಜೊತೆಗೆ ಕಾಮಿಡಿ ಮಾಡಿದ್ದ ಸಿದ್ದು, ಇದೀಗ ಪ್ರೀತಿ ಮಾಡುವುದಕ್ಕೆ ಮುಂದಾಗಿದ್ದಾರೆ. ‘ಲವ್ ಯೂ ಮುದ್ದು’ ಎಂದು ಪ್ರೀತಿಸುವುದಕ್ಕೆ ರೆಡಿಯಾಗಿದ್ದಾರೆ.
‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಮುಂತಾದ ವಿಭಿನ್ನ ಹೆಸರಿನ ಮತ್ತು ಕಥೆಗಳಿದ್ದ ಚಿತ್ರಗಳನ್ನು ನಿರ್ದೇಶಿಸಿದ್ದ ಕುಮಾರ್ ನಿರ್ದೇಶನದ ಇದೀಗ ಪ್ರೇಮಕಥೆಯೊಂದಿಗೆ ಬಂದಿದ್ದಾರೆ. ಅವರ ಹೊಸ ಸಿನಿಮಾ ‘ಲವ್ ಯು ಮುದ್ದು’ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ. MRT ಮ್ಯೂಸಿಕ್ ಯೂಟ್ಯೂಬ್ ನಲ್ಲಿ ‘ಲವ್ ಯು ಮುದ್ದು’ ಚಿತ್ರದ ಮೆಲೋಡಿ ಗೀತೆ ಬಿಡುಗಡೆ ಆಗಿದೆ.
ಇದನ್ನು ಓದಿ: ‘ಮಾರುತ’ ಚಿತ್ರದಲ್ಲಿ ನಾಯಕ ನಾನಲ್ಲ ಎಂದ ‘ದುನಿಯಾ’ ವಿಜಯ್
ಅನಿರುದ್ಧ್ ಶಾಸ್ತ್ತೀ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಹಾಡಿಗೆ ಸೋನು ನಿಗಮ್, ಐಶ್ವರ್ಯ ರಂಗರಾಜನ್ ಹಾಗೂ ಸುರಭಿ ಭಾರದ್ವಾಜ್ ಧ್ವನಿಯಾಗಿದ್ದಾರೆ. ‘ಲವ್ ಯು ಮುದ್ದು’ ಹಾಡಿಗೆ ಸಿದ್ದು ಮೂಲಿಮನಿ ಮತ್ತು ರೇಷ್ಮಾ ಹೆಜ್ಜೆ ಹಾಕಿದ್ದಾರೆ.
‘ಲವ್ ಯು ಮುದ್ದು’ ಮಹಾರಾಷ್ಟ್ರದಲ್ಲಿ ನಡೆದ ನೈಜ ಪ್ರೇಮ ಕಥಾ ಹಂದರ ಒಳಗೊಂಡಿದೆ. ಸಿದ್ದು ಮತ್ತು ರೇಷ್ಮಾ ಜೊತೆಗೆ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಉಷಾ ಚಿತ್ರದಲ್ಲಿದ್ದಾರೆ.
ಕಿಶನ್ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಡಿ ಕಿಶನ್ ಟಿ.ಎನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತವಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.





