Mysore
19
overcast clouds

Social Media

ಭಾನುವಾರ, 10 ನವೆಂಬರ್ 2024
Light
Dark

ಮತ್ತೆ ನಿರ್ಮಾಣಕ್ಕೆ ಶಿಲ್ಪಾ ಗಣೇಶ್‍; ಈ ಬಾರಿ ತುಳು ಚಿತ್ರ ನಿರ್ಮಾಣ

ಗಣೇಶ್‍ ಪತ್ನಿ ಶಿಲ್ಪಾ ಗಣೇಶ್‍ ಅವರಿಗೆ ಚಿತ್ರ ನಿರ್ಮಾಣ ಹೊಸದೇನಲ್ಲ. ಈಗಾಗಲೇ ಅವರು ‘ಮಳೆಯಲಿ ಜೊತೆಯಲಿ’ ಮತ್ತು ‘ಕೂಲ್‍’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕಳೆದ ಒಂದು ದಶಕದಿಂದ ಚಿತ್ರ ನಿರ್ಮಾಣದಿಂದ ದೂರವೇ ಇದ್ದ ಅವರು, ಇದೀಗ ಹೊಸ ಚಿತ್ರವೊಂದರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಈ ಬಾರಿ ಶಿಲ್ಪಾ ನಿರ್ಮಿಸುತ್ತಿರುವುದು ಕನ್ನಡ ಚಿತ್ರವನ್ನಲ್ಲ, ಬದಲಿಗೆ ತುಳು ಚಿತ್ರವನ್ನು. ಮೂಲತಃ ದಕ್ಷಿಣ ಕನ್ನಡದವರಾದ ಶಿಲ್ಪಾ ಅವರ ಮಾತೃಭಾಷೆ ತುಳು. ಆದರೆ, ಇದುವರೆಗೂ ಅವರು ತುಳು ಚಿತ್ರರಂಗಕ್ಕೆ ಕಾಲಿಟ್ಟಿರಲಿಲ್ಲ. ಈಗ ಮೊದಲ ಬಾರಿಗೆ ಅವರು ತಮ್ಮ ಗೋಲ್ಡನ್‍ ಮೂವೀಸ್‍ ಬ್ಯಾನರ್‍ನಡಿ ಒಂದು ಹೊಸ ತುಳು ಚಿತ್ರವನ್ನು ನಿರ್‍ಮಾಣ ಮಾಡುತ್ತಿದ್ದಾರೆ.

ಇದೊಂದು ಕಾಮಿಡಿ ಚಿತ್ರವಾಗಿದ್ದು ಸಂದೀಪ್‍ ಬೆದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರಂತೆ. ಈ ಹಿಂದೆ ‘ಅಪ್ಪೆ ಟೀಚರ್‍’, ‘ಬರ್ಸ’, ‘ಅಂಬರ್‍ ಕ್ಯಾಟರರ್ಸ್’ ಮುಂತಾದ ಚಿತ್ರಗಳಿಗೆ ಸಹಾಕ ನಿರ್ದೇಕರಾಗಿ ಕೆಲಸ ಮಾಡಿದ್ದ ಸಂದೀಪ್‍, ಈ ಚಿತ್ರದ ಮೂಲಕ ಸ್ವತಂತ್ರ ನಿರ್‍ದೇಶಕರಾಗುತ್ತಿದ್ದಾರೆ.

ವಿಶೇಷವೆಂದರೆ, ಬಿಜೆಪಿ ಮುಖಂಡ ಹರಿಕೃಷ್ಣ ಭಂಟ್ವಾಳ ಅವರ ಮಗ ನಿತ್ಯಪ್ರಕಾಶ್‍ ಭಂಟ್ವಾಳ ಚಿತ್ರಕ್ಕೆ ನಾಯಕರಾಗಿ ನಟಿಸುತ್ತಿದ್ದಾರೆ. ಅವರಿಗೆ ಸೂಕ್ತವಾದ ನಾಯಕಿಯ ಹುಡುಕಾಟ ನಡೆದಿದೆ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು, ಕರಾವಳಿ ಭಾಗದಲ್ಲೇ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗಿದೆ. ‘ಗೋಲ್ಡನ್‍ ಸ್ಟಾರ್‍’ ಗಣೇಶ್‍ ಸಹ ಚಿತ್ರದಲ್ಲಿ ಒಂದು ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ನಿರೀಕ್ಷೆ ಇದೆ.

ಈಗಾಗಲೇ ಪ್ರೀ-ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಡಿಸೆಂಬರ್‍ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

Tags: