Mysore
21
scattered clouds
Light
Dark

ದರ್ಶನ್‌ ನೋಡಲು ಎರಡನೇ ಬಾರಿಗೆ ಬಳ್ಳಾರಿ ಜೈಲಿಗೆ ಭೇಟಿ ನೀಡಿದ ವಿಜಯಲಕ್ಷ್ಮಿ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಇಂದು ಜೈಲಿಗೆ ಭೇಟಿ ನೀಡಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಅಂಡ್‌ ಗ್ಯಾಂಗ್‌ ವಿರುದ್ಧ ಪೊಲೀಸರು ನಿನ್ನೆ ತಾನೇ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯ ಬಳಿಕ ಇಂದು ದರ್ಶನ್‌ ಭೇಟಿಗೆ ದಿನಕರ್‌ ತೂಗುದೀಪ್‌ ಜೊತೆ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದರು.

ಈ ವೇಳೆ ಹೈ ಸೆಕ್ಯುರಿಟಿ ಸೆಲ್‌ನಿಂದ ಹೊರಬಂದ ಆರೋಪಿ ದರ್ಶನ್‌, ಪತ್ನಿ ಮತ್ತು ಸಹೋದರನನ್ನು ನೋಡಿ ಭಾವುಕರಾಗಿದ್ದಾರೆ.

ಇನ್ನು ಬಳ್ಳಾರಿ ಸೆಂಟ್ರಲ್‌ ಜೈಲಿನ ಸಂದರ್ಶಕರ ಕೊಠಡಿಯಲ್ಲಿ ಸಹೋದರ ಮತ್ತು ಪತ್ನಿಯ ಜೊತೆ ದರ್ಶನ್‌ ಮಾತನಾಡಲು ಅರ್ಧ ಗಂಟೆ ಅವಕಾಶ ನೀಡಲಾಗಿತ್ತು. ಈ ವೇಳೆ ದರ್ಶನ್‌ ಜೊತೆ ದಿನಕರ್‌ ತೂಗುದೀಪ್‌ ಹಾಗೂ ವಿಜಯಲಕ್ಷ್ಮಿ ಅವರು, ಮುಂದಿನ ಕಾನೂನು ಸಮರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.