Mysore
16
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಪುನೀತ್‌ ರಾಜ್‌ಕುಮಾರ್‌ 49ನೇ ಹುಟ್ಟುಹಬ್ಬ: ಮೈಸೂರಲ್ಲಿ ಮನೆಮಾಡಿದ ಸಂಭ್ರಮ!

ಮೈಸೂರು: ಕರ್ನಾಟಕ ರತ್ನ ದಿ. ಪುನಿತ್‌ ರಾಜ್‌ಕುಮಾರ್‌ ಅವರ 49ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ನಗರದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.

ನಗರದ ಪ್ರಮುಖ ಬೀದಿಗಳಲ್ಲಿ ಪುನೀತರಿಗೆ ಗೌರವ ನಮನ ಸಲ್ಲಿಸಿರುವ ಅಭಿಮಾನಿಗಳು, ನಟನ ಹೆಸರಿನಲ್ಲಿ ಸಾರ್ವಜನಿಕರಿಗೆ ಅನ್ನದಾನ ಮಾಡಿದ್ದಾರೆ.

ವಿಶ್ವದಾಖಲೆಯ ಆರ್ಟಿಸ್ಟ್‌ ಪುನೀತ್‌ ಕುಮಾರ್‌, ರಂಗೋಲಿ ಕಲೆಗಾರ್ತಿ ಲಕ್ಷ್ಮೀ ಮತ್ತು ತಂಡದಿಂದ ಅರಮನೆಯ ಕೋಟೆ ಆಂಜನೇಯ ದೇವಾಲಯದ ಮುಂಭಾಗ ರಂಗೋಲಿಯಿಂದ ಪುನೀತ್‌ ರಾಜ್‌ಕುಮಾರ್‌ ಅವರ ಚಿತ್ರವನ್ನು ಬಿಡಿಸಿದ್ದಾರೆ.

ಇನ್ನು ಮೈಸೂರಿನ ಅಗ್ರಹಾರ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪುನೀತ್‌ ಅವರ 50 ಅಡಿ ಕಟೌಟ್‌ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಗೆ ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಫ್ಯಾನ್ಸ್‌ ಫಾಲೋಯಿಂಗ್‌ ಇರುವುದು ಗೊತ್ತೇಯಿದೆ. ಅದರಂತೆ ಅಮೆರಿಕದ ನ್ಯೂಯಾರ್ಕ್ ಸಿಟಿಯ ಎಂಟರ್‌ಟೈನ್‌ಮೆಂಟ್ ಹಬ್ ಎಂದು ಕರೆಯುವ ಟೈಮ್ ಸ್ಕ್ವೇರ್‌ನಲ್ಲಿ ಕನ್ನಡ ಚಿತ್ರ ನಟ ದಿ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಟೈಮ್ ಸ್ಕ್ವೇರ್ ಮೇಲೆ ಪುನೀತ್ ರಾಜ್‌ಕುಮಾರ್ ಮತ್ತು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಫೋಟೋ ಹಾಕಿ ಸಂಭ್ರಮಿಸಲಾಗಿದೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಫೇಸ್‌ ಬುಕ್‌ನಲ್ಲಿ ಪುನೀತ್‌ ಅವರ ಫೋಟೋ ಒಂದನ್ನು ಹಾಕಿ ಶುಭ ಕೋರಿದ್ದು, ಪುನೀತ್ ರಾಜ್‌ಕುಮಾರ್ ಅವರ ಸಾಮಾಜಿಕ ಕಾರ್ಯಗಳು ಬಹಳಷ್ಟು ಜನರಿಗೆ ಪ್ರೇರಣೆಯಾಗಿವೆ ಎಂದು ಸಾಲುಗಳನ್ನು ಬರೆದುಕೊಂಡಿದ್ದಾರೆ.

Tags:
error: Content is protected !!