Mysore
25
few clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಹಾರರ್ ಚಿತ್ರದಲ್ಲಿ ‘ರಾಕ್ಷಸ’ನಾದ ಪ್ರಜ್ವಲ್‍!

ಒಂದು ಹಾರರ್ ಚಿತ್ರದಲ್ಲಿ ಸದ್ದಿಲ್ಲದೆ ನಟಿಸಿರುವುದಾಗಿ ಪ್ರಜ್ವಲ್‍ ಕೆಲವು ದಿನಗಳ ಹಿಂದೆ ‘ಚೀತಾ’ ಚಿತ್ರೀಕರಣದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ್ದರು. ಆದರೆ, ಆ ಚಿತ್ರದ ಬಗ್ಗೆ ಹೆಚ್ಚು ವಿಷಯವನ್ನು ಬಿಟ್ಟುಕೊಟ್ಟಿರಲಿಲ್ಲ. ಏಕೆಂದರೆ, ಆ ಚಿತ್ರದ ಬಿಡುಗಡೆಗೆ ಇನ್ನೂ ಸ್ವಲ್ಪ ಸಮಯವಿದೆ. ಮೊದಲು ‘ಮಾಫಿಯಾ’ ಬರಬೇಕು. ಆ ನಂತರ ‘ಗಣ’ ಎಂಬ ಇನ್ನೊಂದು ಚಿತ್ರ ಬರಬೇಕು. ಆ ನಂತರ ಈ ಹಾರರ್ ಚಿತ್ರದ ಸರದಿ. ‘ಮಾಫಿಯಾ’ ಚಿತ್ರವೇ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು, ಹಾರರ್ ಚಿತ್ರದ ಸರದಿ ಯಾವಾಗ?

ಗೊತ್ತಿಲ್ಲ. ಈ ಮಧ್ಯೆ, ಪ್ರಜ್ವಲ್‍, ಗುರುವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಚಿತ್ರದ ಪೋಸ್ಟರ್‍ ಬಿಡುಗಡೆ ಮಾಡಲಾಗಿದೆ. ಅಂದಹಾಗೆ, ಚಿತ್ರಕ್ಕೆ ‘ರಾಕ್ಷಸ’ ಎಂಬ ಹೆಸರನ್ನು ಇಡಲಾಗಿದೆ. ‘ಮಾಫಿಯಾ’ ಚಿತ್ರವನ್ನು ನಿರ್ದೇಶಿಸಿರುವ ಲೋಹಿತ್‍ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದ ನಂತರ ಅವರಿಬ್ಬರ ಕಾಂಬಿನೇಷನ್‍ನ ಎರಡನೇ ಚಿತ್ರ. ವಿಶೇಷವೆಂದರೆ, ಎರಡೂ ಚಿತ್ರಗಳು ಸಿದ್ಧವಾಗಿದ್ದು, ಎರಡೂ ಚಿತ್ರಗಳು ಬಿಡುಗಡೆಯಾಗಬೇಕಿವೆ.

‘ರಾಕ್ಷಸ’ ಮತ್ತೊಂದು ಹಾರರ್‍ ಚಿತ್ರವಾಗಿರುವುದಿಲ್ಲ ಎಂದು ಪ್ರಜ್ವಲ್‍ ಮೊದಲೇ ಹೇಳಿದ್ದರು. ಹಾಗಿರುವಾಗ, ಈ ಚಿತ್ರದ ವಿಶೇಷತೆ ಏನು? ಇದೇ ಮೊದಲ ಬಾರಿಗೆ ವರ್ಲ್ಡ್ ಸಿನಿಮಾದಲ್ಲಿ ಹಾರಾರ್ ಟೈಂಲೂಪ್ ಕಥೆಯೊಂದನ್ನು ಕನ್ನಡದಲ್ಲಿ ಪ್ರಜ್ವಲ್‍ ಮತ್ತು ಲೋಹಿತ್‍ ಮಾಡಿದ್ದಾರೆ. ಪ್ರಜ್ವಲ್‍ ಅಭಿನಯದ ‘ಗಣ’ ಚಿತ್ರವು ಟೈಮ್‍ ಲೂಪ್‍ ಚಿತ್ರವಾಗಿದ್ದು, ಇದು ಹಾರರ್ ಟೈಮ್‍ ಲೂಪ್‍ ಚಿತ್ರ ಎಂಬುದು ವಿಶೇಷ. ಇಷ್ಟಕ್ಕೂ ಟೈಮ್‍ ಲೂಪ್‍ ಎಂದರೆ ಏನು ಎಂಬುದು ಗೊತ್ತಾಗಬೇಕಿದ್ದರೆ, ಚಿತ್ರ ನೋಡಬೇಕು.

ಶಾನ್ವಿ ಎಂಟರ್ಪ್ರೈಸಸ್ ಅಡಿಯಲ್ಲಿ ದೀಪು ಬಿ.ಎಸ್ ಮತ್ತು ನವೀನ್ ಗೌಡ ಹಾಗೂ ಮಾನಸ ಜಂಟಿಯಾಗಿ ‘ರಾಕ್ಷಸ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುಮಾರು 55 ದಿನಗಳ ಕಾಲ ‘ರಾಕ್ಷಸ’ ಸಿನಿಮಾ ಚಿತ್ರೀಕರಣ ಮಾಡಲಾಗಿದ್ದು ಸಂಪೂರ್ಣ ಸಿನಿಮಾ ಚಿತ್ರೀಕರಣವನ್ನು ರಾಮೋಜಿ ರಾವ್ ಫಿಲ್ಮಂ ಸಿಟಿಯಲ್ಲಿ ಮಾಡಲಾಗಿದೆ. ಪ್ರಜ್ವಲ್ ಜೊತೆಯಾಗಿ ಅರುಣ್ ರಾಥೋಡ್, ಶ್ರೀಧರ್, ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ, ಜಯಂತ್ ಇನ್ನು ಅನೇಕರು ಅಭಿನಯಿಸಿದ್ದಾರೆ.

‘ರಾಕ್ಷಸ’ನಿಗೆ ನೋಬಿನ್ ಪಾಲ್ ಸಂಗೀತ ಮತ್ತು ಜೇಬಿನ್ ಪಿ ಜೋಕಬ್ ಛಾಯಾಗ್ರಹಣವಿದೆ.

Tags:
error: Content is protected !!