Mysore
25
light rain

Social Media

ಶುಕ್ರವಾರ, 14 ಆಗಸ್ಟ್ 2026
Light
Dark

“ಪೆದ್ದಿ” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ನವದೆಹಲಿ: ತೆಲುಗಿನ ಬಹುನಿರೀಕ್ಷಿತ ಸಿನಿಮಾ ಖ್ಯಾತ ನಟ ರಾಮ್‌ ಚರಣ್‌, ಶಿವರಾಜ್‌ ಕುಮಾರ್‌ ಅಭಿನಯದ ʼಪೆದ್ದಿʼ ಸಿನಿಮಾ ಮುಂದಿನ ವರ್ಷ ಮಾರ್ಚ್‌ 27ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ʼಪೆದ್ದಿʼ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶಿಸಿದ್ದು, ವೃದ್ದಿ ಸಿನಿಮಾಸ್‌ ಬ್ಯಾನರ್‌ ಅಡಿಯಲ್ಲಿ ಮೈತ್ರಿ ಮೂವಿ ಮೇಕರ್ಸ್‌ ಮತ್ತು ಸುಕುಮಾರ್‌ ರೈಟಿಂಗ್ಸ್‌ ಪ್ರಸ್ತುತಪಡಿಸಿದ್ದಾರೆ.

ಪೆದ್ದಿ ಚಿತ್ರದ 1.05 ನಿಮಿಷಗಳ ಮೊದಲ ಶಾರ್ಟ್‌ನಲ್ಲಿ ನಟ ಕ್ರಿಕೆಟ್‌ ಬ್ಯಾಟ್‌ ಹಿಡಿದು ಚೆಂಡನ್ನು ಪಾರ್ಕ್‌ನಿಂದ ಹೊರಗೆ ಹೊಡೆಯುವುದನ್ನು ಕಾಣಬಹುದಾಗಿದೆ.

ಈ ಚಿತ್ರದಲ್ಲಿ ಜಾಹ್ನವಿ ಕಪೂರ್‌, ಶಿವರಾಜ್‌ಕುಮಾರ್‌, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನು ವೆಂಕಟ ಸತೀಸ್‌ ನಿರ್ಮಾಣ ಮಾಡುತ್ತಿದ್ದು, ಎ.ಆರ್‌.ರೆಹಮಾನ್‌ ಸಂಗೀತ, ಆರ್‌.ರತ್ನವೇಲು ಛಾಯಾಗ್ರಹಣ, ನವೀನ್‌ ನೂಲಿ ಸಂಕಲನ ಮಾಡಿದ್ದಾರೆ.

Tags:
error: Content is protected !!