Mysore
25
broken clouds

Social Media

ಸೋಮವಾರ, 26 ಜನವರಿ 2026
Light
Dark

13 ವರ್ಷಗಳ ನಂತರ ತಮಿಳು ಸಿನಿಮಾಗೆ ಎಂಟ್ರಿ ಕೊಟ್ಟಾ ಮೇಘನಾ ರಾಜ್‌

ರಜನಿಕಾಂತ್‍ ಅಭಿನಯದ ‘ಜೈಲರ್ 2’ ಚಿತ್ರದಲ್ಲಿ ಶಿವರಾಜಕುಮಾರ್ ‍ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಷಯವೇ. ಈಗ ಆ ಚಿತ್ರದಲ್ಲಿ ಕನ್ನಡದ ಮೇಘನಾ ರಾಜ್‍ ಸಹ ನಟಿಸುತ್ತಿರುವ ಸುದ್ದಿ ಬಂದಿದೆ.

ಮೇಘನಾ ರಾಜ್‍, ತಮಿಳಿನಲ್ಲಿ ನಟಿಸುತ್ತಿರುವುದು ಹೊಸದೇನಲ್ಲ. ಸುಮಾರು 15 ವರ್ಷಗಳ ಹಿಂದೆಯೇ ಅವರು ‘ಕಾದಲ್‍ ಸೊಲ್ಲ ವಂದೇನನ್‍’, ‘ಉಯರತಿರರು 420’ ಮತ್ತು ‘ನಂದ ನಂದಿತ’ ಚಿತ್ರಗಳಲ್ಲಿ ನಟಿಸಿದ್ದರು. 2012ರಲ್ಲಿ ಬಿಡುಗಡೆಯಾದ ‘ನಂದ ನಂದಿತ’ ನಂತರ ಅವರು ಯಾವುದೇ ತಮಿಳು ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ‘ಜೈಲರ್ 2’ ಚಿತ್ರದ ಮೂಲಕ ಅವರು ಕಾಲಿವುಡ್‍ಗೆ ವಾಪಸ್ಸಾಗಿದ್ದಾರೆ.

ಇದನ್ನು ಓದಿ: ‘ಮಾರ್ನಮಿ’ ಟ್ರೇಲರ್‍ಗೆ ಸುದೀಪ್‍ ಧ್ವನಿ: ನ.28ಕ್ಕೆ ಚಿತ್ರ ಬಿಡುಗಡೆ

‘ಜೈಲರ್ 2’ ಚಿತ್ರವು 2026ರ ಜೂನ್‍.12ರಂದು ಬಿಡುಗಡೆಯಾಗುತ್ತಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್‍ ಜೊತೆಗೆ ಎಸ್.ಜೆ. ಸೂರ್ಯ, ರಮ್ಯಾ ಕೃಷ್ಣ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದು, ಕನ್ನಡದ ಶಿವರಾಜಕುಮಾರ್, ಹಿಂದಿಯ ಮಿಥುನ್‍ ಚಕ್ರವರ್ತಿ, ತೆಲುಗಿನ ನಂದಮೂರಿ ಬಾಲಕೃಷ್ಣ, ಮಲಯಾಳಂನ ಮೋಹನ್‍ ಲಾಲ್‍ ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಜೈಲರ್ 2’ ಚಿತ್ರವು 2023ರಲ್ಲಿ ಬಿಡುಗಡೆಯಾದ ‘ಜೈಲರ್’ ಚಿತ್ರದ ಮುಂದಿನ ಭಾಗವಾಗಿದ್ದು, ಈ ಚಿತ್ರಕ್ಕೆ ನೆಲ್ಸನ್‍ ದಿಲೀಪ್‍ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದರೆ, ಸನ್‍ ಪಿಕ್ಚರ್ಸ್‌ನ ಕಲಾನಿಧಿ ಮಾರನ್‍ ನಿರ್ಮಾಣ ಮಾಡುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಈ ಚಿತ್ರಕ್ಕಿದೆ.

Tags:
error: Content is protected !!