Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

2026ರ ಸಂಕ್ರಾಂತಿಗೆ ಬರಲಿದ್ದಾನೆ ‘ಮ್ಯಾಂಗೋ ಪಚ್ಚ’

ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ ‘ಮ್ಯಾಂಗೋ ಪಚ್ಚ’ ಸಿನಿಮಾದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಇದೀಗ ಸಂಚಿತ್‍ ಅಭಿನಯದ ಮೊದಲ ಚಿತ್ರದ ಬಿಡುಗಡೆಗೆ ಕೊನೆಗೂ ಮುಹೂರ್ತ ಸಿಕ್ಕಿದೆ.

‘ಮ್ಯಾಂಗೋ ಪಚ್ಚ’ ಚಿತ್ರವು 2026ರ ಜನವರಿ 15ರಂದು ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಪ್ರಭಾಸ್‍ ಅಭಿನಯದ ತೆಲುಗಿನ ‘ದಿ ರಾಜಾ ಸಾಬ್‍’, ವಿಜಯ್‍ ಅಭಿನಯದ ತಮಿಳಿನ ‘ಜನನಾಯಗನ್‍’ ಮುಂತಾದ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇಂಥಾ ದೊಡ್ಡ ಚಿತ್ರಗಳ ಎದುರು ‘ಮ್ಯಾಂಗೋ ಪಚ್ಚ’ ಸಹ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿರುವುದು ವಿಶೇಷ. ‘ಮ್ಯಾಂಗೋ ಪಚ್ಚ’ ಚಿತ್ರದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ.

ಇದನ್ನು ಓದಿ: ರಾಜಮೌಳಿ – ಮಹೇಶ್‍ ಬಾಬು ಹೊಸ ಚಿತ್ರ ‘ವಾರಣಾಸಿ’

ಪಕ್ಕ ಮಾಸ್ ಎಂಟಟೈನ್ಮೆಂಟ್ ಸಿನಿಮಾ ಇದಾಗಿದ್ದು, 2001ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಇಲ್ಲಿ ನಾಯಕನ ಹೆಸರು ಪ್ರಶಾಂತ್‍. ಎಲ್ಲರೂ ಅವನನ್ನು ಪಚ್ಚ ಎಂದು ಕರೆಯುತ್ತಿರುತ್ತಾರೆ. ಇಂಥ ಪಚ್ಚ, ‘ಮ್ಯಾಂಗೋ ಪಚ್ಚ’ ಆಗುವುದು ಹೇಗೆ ಎಂಬುದರ ಸುತ್ತ ಚಿತ್ರ ಸುತ್ತುತ್ತದೆ. ಇದು ಮೈಸೂರಿನ ಕಥೆ. ರಾಜನ ವಿರುದ್ಧ ಸೈನಿಕ ಹೇಗೆ ತಿರುಗಿಬಿದ್ದ ಎಂಬುದರ ಸುತ್ತ ಈ ಚಿತ್ರ ಸುತ್ತುತ್ತದೆ.

ಸಂಚಿತ್‍ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ, ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜಯ್, ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಾಹಣವಿದೆ. ‘ಮ್ಯಾಂಗೋ ಪಚ್ಚ’ ಚಿತ್ರವನ್ನು KRG ಸ್ಟುಡಿಯೋಸ್‍ ಮತ್ತು ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಇನ್ನು, ಈ ಚಿತ್ರಕ್ಕೆ ವಿವೇಕ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Tags:
error: Content is protected !!