Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಡಿ.ಕೆ ಸಾಹೇಬ್ರು ತಪ್ಪಿಲ್ಲ ಇದರಲ್ಲಿ, ಇದೆಲ್ಲಾ ಸಾಧು ಕೋಕಿಲ ಕಿತಾಪತಿ ಎಂದ ಕಿಚ್ಚ ಸುದೀಪ್‍

kicha sudeep

ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂದರ್ಭದಲ್ಲಿ, ಚಿತ್ರರಂಗದಲ್ಲಿ ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಇದನ್ನು ಎಚ್ಚರಿಕೆ ಅಂತಾದರೂ ಅಂದುಕೊಳ್ಳಿ ಅಥವಾ ಮನವಿ ಎಂದಾದರೂ ತಿಳಿದುಕೊಳ್ಳಿ ಎಂದಿದ್ದರು. ಈ ಹೇಳಿಕೆ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಕೆಲವು ನಟ-ನಟಿಯರು ಡಿಕೆಶಿ ವಿರುದ್ಧ ತಮ್ಮ ಬೇಸರವನ್ನು ಹೊರಹಾಕಿದ್ದರು.

ಈ ಕುರಿತು ಸುದೀಪ್‍ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಇದರಲ್ಲಿ ಡಿ.ಕೆ.ಶಿವಕುಮಾರ್ ಅವರ ತಪ್ಪಿಲ್ಲ, ಇದು ನಟ ಮತ್ತು ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಕಿತಾಪತಿ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಇದೆಲ್ಲಾ ಸಾಧು ಕೋಕಿಲ. ಇದರಲ್ಲಿ ಡಿಕೆ ಸಾಹೇಬರದ್ದು ಏನೂ ಇಲ್ಲ. ಚಿತ್ರರಂಗದವರು ಚಿತ್ರರಂಗದ ಕಾರ್ಯಕ್ರಮಕ್ಕೆ ಬರಲಿಲ್ಲ ಎಂಬ ಬೇಸರದಲ್ಲಿ ಅವರು ಮಾತನಾಡಿದ್ದರು. ಆದರೆ, ಎಲ್ಲರನ್ನೂ ಒಟ್ಟಿಗೆ ಕರೆದರೆ, ಸಂಭಾಳಿಸುವುದು ಹೇಗೆ? ಸೆಕ್ಯುರಿಟಿ ಕೊಡುವುದು ಹೇಗೆ? ಎಂದು ಬಹಳಷ್ಟು ಜನರನ್ನು ಕರೆದಿರಲಿಲ್ಲ. ಅದನ್ನ ಮೊದಲೇ ಅವರಿಗೆ ಹೇಳಬೇಕಿತ್ತು. ಅಲ್ಲಿ ಬಂದು ಮಾತನಾಡಿದಾಗ ಸೈಲೆಂಟ್‌ ಆಗಿದ್ದರು. ಇದು ಸಾಧು ಅವರದ್ದೇ ಕಿತಾಪತಿ. ವೈಯಕ್ತಿಕವಾಗಿ ಕಾರ್ಯಕ್ರಮಕ್ಕೆ ಕರೆದವರು ಬಂದಿದ್ದಾರೆ. ಕೆಲವರಿಗೆ ಬರೋಕಾಗಿಲ್ಲ’ ಎಂದರು.

ಇದರಲ್ಲಿ ಸಾಧು ಅವರದ್ದೂ ತಪ್ಪಿಲ್ಲ ಎಂದ ಸುದೀಪ್‍, ‘ಅವರು ಯಾವಾಗಲೂ ತಮಾಷೆ ಮಾಡಿಕೊಂಡೇ ಇರ್ತಾರೆ. ಇದನ್ನೂ ತಮಾಷೆಯಾಗೇ ಹೇಳಿದ್ದಾರೆ. ಆದರೆ, ಅದು ಗಂಭೀರವಾಯ್ತು’ ಎಂದು ಹೇಳಿದರು.

Tags:
error: Content is protected !!