Mysore
20
overcast clouds

Social Media

ಗುರುವಾರ, 10 ಅಕ್ಟೋಬರ್ 2024
Light
Dark

ʼಬಿಗ್‌ ಬಾಸ್‌ ಸೀಸನ್‌ 11ʼ ಕುರಿತು ಕಿಚ್ಚ ಸುದೀಪ್‌ ಸುದ್ದಿಗೋಷ್ಠಿ

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ದೊಡ್ಮನೆಯ ಪ್ರೋಮೋ ರಿಲೀಸ್‌ ಆಗಿ ಮೆಚ್ಚುಗೆ ಗಳಿಸಿದೆ. ಬಿಗ್‌ ಬಾಸ್‌ ನಿರೂಪಣೆಯ ಹೊಣೆ ಹೊತ್ತಿರುವ ಕಿಚ್ಚ ಸುದೀಪ್‌ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಹಲವಾರು ಇಂಟ್ರೆಸ್ಟಿಂಗ್‌ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಜತೆಗೆ ಈ ಬಾರಿಯ ಬಿಗ್‌ ಬಾಸ್‌ ನಲ್ಲಿ ಕಿಚ್ಚ ನಿರೂಪಣೆ ಮಾಡುತ್ತಾರಾ?ಇಲ್ವಾ? ಎನ್ನುವುದು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ಬಗ್ಗೆಯೂ ಕಿಚ್ಚ ಸುದೀಪ್‌ ಸ್ಪಷ್ಟನೆ ನೀಡಿದ್ದಾರೆ.

ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಸ್ವರ್ಗ ಮತ್ತು ನರಕ ಎಂಬ ಥೀಮ್‌ ಇರಲಿದೆ. ಇಲ್ಲಿಯವರೆಗೆ ಸ್ಪರ್ಧಿಗಳು ಮನೆಯ ಒಳಗೆ ಹೋದಮೇಲೆ ಟೀಮ್‌ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಡುವಾಗಲೇ ನಾವೇ 2 ತಂಡ ಮಾಡಿ ಕಳುಹಿಸುತ್ತೇವೆ. ಇದು ಈ ಸೀಸನ್‌ನ ಸ್ಪೆಷಾಲಿಟಿ ಎಂದು ಸುದೀಪ್‌ ತಿಳಿಸಿದ್ದಾರೆ.

ಇನ್ನೂ ತಮ್ಮ ನಿರೂಪಣೆ ಬಗ್ಗೆ ಇದ್ದ ವದಂತಿ ಬಗ್ಗೆ ಮಾತನಾಡಿದ ಅವರು, ಈ ಸೀಸನ್‌ ನಿರೂಪಣೆ ಮಾಡೋದು ಬೇಡ ಅಂತ ಯೋಚಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಕಳೆದ 10ವರ್ಷಗಳಿಂದ ಬಿಗ್‌ ಬಾಸ್‌ ಶೋ ನಿರೂಪಣೆ ಮಾಡುತ್ತಲೇ ಬಂದಿದ್ದೇನೆ. ಈ ಬಾರಿ ಬೇರೆಯವರು ನಿರೂಪಣೆ ಮಾಡಲಿ ಎಂದೇ ನಿರ್ಧರಿಸಿದ್ದೆ, ಹಾಗಂತ ವಾಹಿನಿಯ ಜೊತೆ ಒಡನಾಟ ಚೆನ್ನಾಗಿರಲಿಲ್ಲ ಅಂತ ಅಲ್ಲ. ತಂಡ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರತಿ ಬಾರಿ ಶೋ ಪ್ರಾರಂಭವಾಗ್ತಿದಂತೆ ನನ್ನ ಲೈಫ್‌ ಮ್ಯೂಟ್‌ ಆಗುತ್ತದೆ. ವಾರದಲ್ಲಿ 4ದಿನ ಹೊರ ಹೋಗುಬಹುದು ಅಷ್ಟೆ. ಬಿಗ್‌ ಬಾಸ್‌ ಶೋನ 90% ಜನ ನೋಡುತ್ತಾರೆ. ನಾನು ಕಾರ್ಯಕ್ರಮ ಮಾಡಲು ಇದು ಒಂದು ಕಾರಣ. ಸಿನಿಮಾದ ಜೊತೆ ಈ ಶೋನಿಂದ ಪ್ರೀತಿ ಸಿಕ್ಕಿದೆ. ಶೋ ಮಾಡುವಾಗ ಬಹಳ ಹೊತ್ತು ನಿಂತರೆ ಕಾಲು ನೋವು ಬರುತ್ತದೆ. ಎಲ್ಲವನ್ನೂ ನಿಭಾಹಿಸಿಕೊಂಡು ಮಾಡುತ್ತಿದ್ದೆ ಎಂದಿದ್ದಾರೆ.

ʻಬಿಗ್‌ ಬಾಸ್‌ ಸೀಸನ್‌ 11ʼ ರ ಸುದೀಪ್‌ ನಿರೂಪಣೆಯಲ್ಲಿ ಇದೇ ಸೆ.29ಕ್ಕೆ ಬಿಗ್‌ ಗ್ರ್ಯಾಂಡ್‌ ಆಗಿ ಲಾಂಚ್‌ ಆಗುತ್ತಿದೆ. ಪ್ರತಿದಿನ ರಾತ್ರಿ 9;30ಕ್ಕೆ ಶೋ ಪ್ರಸಾರವಾಗಲಿದೆ.

 

Tags: