Mysore
16
scattered clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಪೈರಸಿ ಬಗ್ಗೆ ಮತ್ತೊಮ್ಮೆ ಖಡಕ್‌ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್‌

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಮಾರ್ಕ್‌ ಚಿತ್ರಕ್ಕೂ ಪೈರಸಿ ಕಾಟ ಶುರುವಾಗಿದೆ. ಪೈರಸಿ ಬಗ್ಗೆ ನಟ ಕಿಚ್ಚ ಸುದೀಪ್‌ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು 4 ಸಾವಿರ ಪೈರಸಿ ಲಿಂಕ್‌ ಡಿಲಿಟ್‌ ಮಾಡಿದ್ದೇವೆ. ಫಸ್ಟ್‌ ಡೇ, ಸೆಕೆಂಡ್‌ ಡೇ ಸೇರಿಸಿ 4 ಸಾವಿರ ಲಿಂಕ್‌ಗಳನ್ನು ಡಿಲಿಟ್‌ ಮಾಡಿದ್ದೇವೆ ಎಂದು ಹೇಳಿದರು.

ಒಟ್ಟಾರೆಯಾಗಿ ಈವರೆಗೆ 9000 ಲಿಂಕ್‌ಗಳನ್ನು ತೆಗೆಸಿದ್ದೇವೆ. ಪೈರಸಿ ಇತ್ತು. ಈಗ ಚಾಲೆಂಜ್‌ ಹಾಕಿಕೊಂಡು ಮಾಡಿದ್ದಾರೆ. ಕಳೆದ ಬಾರಿಯೂ ಕೆಲವು ವ್ಯಕ್ತಿಗಳನ್ನು ಹಿಡಿದು ಬಿಟ್ಟಿದ್ದೇವೆ. ಆದರೆ ಈ ಬಾರಿ ಬಿಡುವ ಮಾತೇ ಇಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ.

Tags:
error: Content is protected !!