Mysore
24
haze

Social Media

ಶನಿವಾರ, 24 ಜನವರಿ 2026
Light
Dark

IFFI ಗಾಲಾ ಪ್ರೀಮಿಯರ್ ನಲ್ಲಿ ಕನ್ನಡದ’ರುಧಿರ್ವನ’ ಪ್ರದರ್ಶನ

ಗೋವಾದಲ್ಲಿ ನಡೆಯುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತೀ ವರ್ಷ ಒಂದಲ್ಲ ಒಂದು ಕನ್ನಡ ಚಿತ್ರದ ಪ್ರೀಮಿಯರ್ ಆಗುತ್ತಾ ಇರುತ್ತದೆ. ಈ ವರ್ಷ, ಕನ್ನಡಿಗ ಅಗ್ನಿ ನಿರ್ದೇಶನದ ಮೊದಲ ಚಿತ್ರ ‘ರುಧಿರ್ವನ’, ಗಾಲಾ ಪ್ರೀಮಿಯರ್ ವಿಭಾಗದಲ್ಲಿ ಪ್ರದರ್ಶನ ಕಂಡಿದೆ.

‘ರುಧಿರ್ವನ’ ಅಂದ್ರೆ ರಕ್ತಸಿಕ್ತವಾದ ಕಾಡು ಎಂದರ್ಥ. ಕಾಡಿನಲ್ಲಿ ನಡೆಯುವ ಒಂದಿಷ್ಟು ಅನಿರೀಕ್ಷಿತ ಘಟನೆಗಳ ಸುತ್ತ ಈ ಚಿತ್ರ ಸಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಡಿನಲ್ಲಿ ನಡೆಯುವ ಹಲವು ಕಥೆಗಳು ಚಿತ್ರವಾಗಿದ್ದು, ಆ ಸಾಲಿಗೆ ‘ರುದಿರ್ವನ’ ಸಹ ಸೇರಿದೆ

ಇದನ್ನು ಓದಿ: 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ಕಿಶೋರ್‌ ನೇಮಕ

‘ರುಧಿರ್ವನ’ ಚಿತ್ರದಲ್ಲಿ ಪಾವನಾ ಗೌಡ, ‘ಭೀಮಾ’ ಚಿತ್ರದ ಖ್ಯಾತಿಯ ಪ್ರಿಯಾ ಶಠಮರ್ಷಣ, ಬಲ ರಾಜವಾಡಿ, ಕೃಷ್ಣ ಹೆಬ್ಬಾಳೆ, ಮೇದಿನಿ ಕೆಳಮನೆ, ಅವಿನಾಶ್‌ ರೈ, ಅರ್ಜುನ್‌ ಕಜೆ, ಅಪೂರ್ವ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಅಗ್ನಿ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ.

ಸಂದೀಪ್‌ ವೆಲ್ಲೂರಿ ಛಾಯಾಗ್ರಹಣ, ರೋಣದ ಬಕ್ಕೇಶ್ ಸಂಗೀತ ಇರುವ ಈ ಚಿತ್ರವನ್ನು ಕ್ರೌಡ್‍ ಫಂಡಿಂಗ್‍ ಮೂಲಕ ನಿರ್ಮಿಸಲಾಗಿದೆ. ಅಗ್ನಿ ಮತ್ತು ಅವರು ಸ್ನೇಹಿತರಲ್ಲದೆ, ಅಗ್ನಿ ಅವರ ಯೂಟ್ಯೂಬ್‍ ಚಂದಾದಾರರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಪಾಯಿಂಟ್‌ ಆಫ್ ವೀವ್‌ ಪಿಕ್ಚರ್‌ ಹೌಸ್‌ ಬ್ಯಾನರ್‌ ಅಡಿ ‘ರುಧಿರ್ವನ’ ಸಿನಿಮಾ ಮೂಡಿಬರಲಿದೆ.

Tags:
error: Content is protected !!