Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್‌ ಬಗ್ಗೆ ಓಂ ಪ್ರಕಾಶ್‌ ರಾವ್‌ ಹೇಳಿದ್ದಿಷ್ಟು!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಖ್ಯಾತ ನಟ ದರ್ಶನ್‌, ಪವಿತ್ರಾ ಗೌಡ, ಸೇರಿದಂತೆ 19 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ದರ್ಶನ್‌ ಅವರ ಹಳೆಯ ಆಪ್ತರಾದ ಕನ್ನಡದ ಖ್ಯಾತ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಅವರು ಹತ್ಯೆ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

ಒಳ್ಳೆಯ ಸಿನಿಮಾ, ಅಭಿಮಾನಿಗಳು, ಕುಟುಂಬ ಸೇರಿದಂತೆ ಎಲ್ಲವನ್ನು ಹೊಂದಿದ್ದ ನಟ ದರ್ಶನ್‌ಗೆ ಇದೆಲ್ಲವೂ ಬೇಕಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂತಹ ಸಂದರ್ಭದಲ್ಲಿ ಒಂದು ವೇಳೆ ಅಂಬರೀಶ್‌ ಅವರು ಇದ್ದಿದ್ದರೇ ದರ್ಶನ್‌ ಅವರ ಕಪಾಳಕ್ಕೆ ಹೊಡೆಯುತ್ತಿದ್ದರು. ಹಾಗೂ ಕರೆದು ಬುದ್ದಿ ಹೇಳುತ್ತಿದ್ದರು ಎಂದರು.

ಮುಂದುವರೆದು, ದರ್ಶನ್‌ ಕರೆದು ನೀನು ಮಾಡಿದ್ದು ತಪ್ಪು ಎಂದು ಖಂಡಿತವಾಗಿಯೂ ಬುದ್ದಿವಾದ ಹೇಳುತ್ತಿದ್ದರು. ಈ ಪ್ರಕರಣದ ಬಗ್ಗೆ ಸುಮಲತಾ ಅಂಬರೀಶ್‌ ಅವರು ಸಹಾ ಬುದ್ದಿವಾದ ಹೇಳುತ್ತಾರೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅವರು ತಿಳಿಸಿದರು.

Tags:
error: Content is protected !!