Mysore
26
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಅಭಿಮಾನ್‍ ಸ್ಟುಡಿಯೋದಲ್ಲಿ 10 ಗುಂಟೆ ಜಾಗ ಬೇಕು ಎಂದ ಕೆ. ಮಂಜು

manju vishnuvardhan

ಬೆಂಗಳೂರು : ವಿಷ್ಣುವರ್ಧನ್‍ ಅವರ ಸ್ಮಾರಕ ಮತ್ತು ಪುಣ್ಯಭೂಮಿಯ ಕುರಿತು ದಿನಕ್ಕೊಂದು ಬೆಳವಣಿಗೆಗಳಾಗುತ್ತಿವೆ.

ಸೋಮವಾರವಷ್ಟೇ, ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‍ ಮಾತನಾಡಿ, ಕೆಂಗೇರಿ ಬಳಿಯಲ್ಲೇ ವಿಷ್ಣುವರ್ಧನ್‍ ಅವರ ಸ್ಮಾರಕ ಕಟ್ಟಲಾಗುವುದು ಮತ್ತು ಸೆ.18ರಂದು ಅಡಿಗಲ್ಲು ಹಾಕಲಾಗುವುದು ಎಂದು ಹೇಳಿದ್ದರು. ಅದರ ಜೊತೆಗೆ ಅಭಿಮಾನ್‍ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್‍ ಅವರ ಪುಣ್ಯಭೂಮಿಯನ್ನು ವಾಪಸ್ಸು ಪಡೆಯುವುದಕ್ಕೆ ಕಾನೂನು ರೀತಿ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಈಗ ಹಿರಿಯ ನಿರ್ಮಾಪಕ ಕೆ. ಮಂಜು ಸಹ ಆ ಜಾಗಕ್ಕಾಗಿ ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರವ ಕೆ.ಮಂಜು, ‘ಸಮಾಧಿ ಜಾಗ ನಮಗೆ ಬೇಕೇ ಬೇಕು. ಕಾನೂನು ರೀತಿಯಲ್ಲಿ ಆ ಜಾಗಕ್ಕೆ ಹೋರಾಟ ಮಾಡುತ್ತೇವೆ. ಸರಕಾರದ ಗಮನಕ್ಕೆ ತಂದು ನಾವು ಹೋರಾಟ ಮಾಡುತ್ತೇವೆ. ಬಾಲಣ್ಣ ಅವರ ಮೊಮ್ಮಗ ಕಾರ್ತಿಕ್ ಅವರನ್ನ ಭೇಟಿ ಆಗಿ ಮಾತಾಡಿದ್ದೇನೆ. ನಮಗೆ ಆ 10 ಗುಂಟೆ ಜಾಗ ಬೇಕೇಬೇಕು ಅಂತ ಮನವಿ ಮಾಡಿದ್ದೇನೆ. ಅಂತ್ಯಕ್ರಿಯೆ ಆದ ಜಾಗ ನಮಗೆ ಪವಿತ್ರವಾದ ಜಾಗ ಅಂತ ಕೇಳಿಕೊಂಡಿದ್ದೇನೆ. ಅಭಿಮಾನ್ ಸ್ಟುಡಿಯೋ ಸರಕಾರದ ಜಾಗ. ನಮಗೆ 10 ಗುಂಟೆ ಜಾಗ ಬೇಕು’ ಎಂದರು. ವಿಷ್ಣುವರ್ಧನ್‍ ಮನೆಯ ಅನ್ನ ತಿಂದಿದ್ದೇನೆ ಎಂದಿರುವ ಅವರು, ‘ಅಭಿಮಾನಿಗಳ ಅಭಿಮಾನ ನೋಡಿ ವಿಷ್ಣುವರ್ಧನ್‍ ಕಣ್ಣೀರು ಹಾಕುತ್ತಿದ್ದರು. ನಾನು ಇದುವರೆಗೂ ಮೈಸೂರಿಗೆ ಹೋಗಿಲ್ಲ. ಪ್ರತೀ ವರ್ಷ ಹೋಗೋದೇ ಅಭಿಮಾನ್‍ ಸ್ಟುಡಿಯೋಗೆ. ಹಾಗಾಗಿ, ನಮಗೆ ಅಲ್ಲೇ ಜಾಗ ಬೇಕು ಮತ್ತು ಅದಕ್ಕೆ ಏನೆಲ್ಲಾ ಹೋರಾಟ ಮಾಡಬೇಕೋ, ಕಾನೂನು ರೀತಿಯಲ್ಲಿ ಖಂಡಿತಾ ಹೋರಾಡುತ್ತೇವೆ’ ಎಂದು ಹೇಳಿದರು.

Tags:
error: Content is protected !!