Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

IND v/s NZ: ಟೀಂ ಇಂಡಿಯಾ ಗೆಲುವಿಗೆ ಸಿನಿ ತಾರೆಯರ ವಿಶ್‌

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಿನ ಫೈನಲ್‌ ಪಂದ್ಯದಲ್ಲಿ ಭಾರತ ಗೆದ್ದು ಬರಲಿ ಎಂದು ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಶುಭ ಕೋರಿದ್ದಾರೆ.

ಮುಂಚೆ ಕ್ರಿಕೆಟ್‌ ಆಡುತ್ತಿದ್ದೆ, ಈಗ ಬರೀ ನೋಡುತ್ತಿದ್ದೇನೆ. ನಮ್ಮ ಭಾರತ ಗೆಲ್ಲಲಿ ಆಲ್‌ ದಿ ಬೆಸ್ಟ್‌, ಜೈ ಆಂಜನೇಯ ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

ಇಂಡಿಯಾ ವಿನ್‌ ಆಗೇ ಆಗುತ್ತಾರೆ. ಆ ಕಡೆ ಟೀಂ ನ್ಯೂಜಿಲೆಂಡ್‌ ಕೂಡ ಕಡಿಮೆಯಿಲ್ಲ. ಅವರ ಫೀಲ್ಡಿಂಗ್‌ ನೋಡಿದರೆ ಭಯ ಆಗುತ್ತದೆ. ಈ ಬಾರಿ ಇಂಡಿಯಾ ಗೆಲ್ಲಬೇಕು ಅಂದರೆ, ಪ್ರತಿ ಬಾಲ್‌ 6 ರನ್‌ ಹೊಡೆಯಬೇಕು. 4 ರನ್‌ ಹೊಡೆದರೆ ಪಕ್ಕಾ ಹಿಡಿಯುತ್ತಾರೆ. ಈ ಸಲ ಭಾರತ ತಂಡ ಗೆಲ್ಲಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಚಂದನ್‌ ಶೆಟ್ಟಿ ಶುಭ ಹಾರೈಸಿದ್ದಾರೆ.

ಆಲ್‌ ದಿ ಬೆಸ್ಟ್‌ ಟೀಂ ಇಂಡಿಯಾ. ಆವತ್ತಿನ ದಿನ ಯಾರು ಉತ್ತಮ ಆಟವಾಡುತ್ತಾರೋ ಅವರಿಗೆ ಗೆಲುವು ಸಿಗುತ್ತದೆ. ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವ ಮುಖ್ಯ. ಯಾರೇ ಸೋತರೂ ಟ್ರೋಲ್‌ ಮಾಡಬೇಡಿ. ಆಟ ಕೂಡ ಕಲೆ ತರಾನೇ ಜನರನ್ನು, ದೇಶವನ್ನು ಬೆಸೆಯಬೇಕು ಎಂದು ನಟ ಕಿಶೋರ್‌ ಟೀಂ ಇಂಡಿಯಾಗೆ ಶುಭ ಕೋರಿದ್ದಾರೆ.

ಟೀಂ ಇಂಡಿಯಾಗೆ ಆಲ್‌ದಿ ಬೆಸ್ಟ್‌. ನಮ್ಮ ದೇಶಕ್ಕೆ ಗೆಲುವಾಗಲಿ. ನಮ್ಮ ಇಂಡಿಯಾ ಟೀಂ ಚೆನ್ನಾಗಿ ಆಡಲಿ ಎಂದು ನಟಿ ಅಂಕಿತಾ ಅಮರ್‌ ಹೇಳಿದ್ದಾರೆ.

Tags:
error: Content is protected !!